ರಾಯಚೂರು,ಫೆ.೨೦- ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ೨ ಕೋಟಿ ರೂ.ಗಳ ಹಣ ದುರುಪಯೋಗಪಡಿಸಿಕೊಂಡ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದೂರನ್ನು ಆಧಾರಿಸಿ ಕೃಷಿ ಸಹಾಯಕ ನಿರ್ದೇಶಕಿ ಹಾಗೂ ಕೃಷಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಕೃಷಿ ಸಹಾಯಕ ನಿರ್ದೇಶಕಿ ನಾಗರತ್ನ ಹಾಗೂ ಕೃಷಿ ಅಧಿಕಾರಿ ಸಿದ್ದಪ್ಪ ಅಮಾನತುಗೊಂಡಿದ್ದು, ಆನೆಹೊಸೂರು ಗ್ರಾ.ಪಂ ಸೇರಿದಂತೆ ವಿವಿಧ ಗ್ರಾ.ಪಂಗಳಲ್ಲಿ ೨೦೨೪-೨೫ನೇ ಸಾಲಿನ ನರೇಗಾ ಕಾಮಗಾರಿಗಳಲ್ಲಿ ೨.೨೫ ಕೋಟಿಗೂ ಅಧಿಕ ಹಣ ಅವ್ಯವಹಾರವಾದ ಹಿನ್ನೆಯಲ್ಲಿ ಈ ಇಬ್ಬರೂ ಅಧಿಕಾರಿಗಲ ವಿರುದ್ದ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿ ಕಡತಗಳನ್ನು ಪರಿಶೀಲಿಸಿ ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ.
ಎಂಐಎಸ್ ವರದಿಯಾನುಸಾರ ೧೭೩ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ೧೫೦ ಕಾಮಗಾರಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ. ಜಿ.ಪಂನಿAದ ಅನುಮೋದನೆ ಪಡೆಯದೆ ೧೭೦ ಕಾಮಗಾರಿಗಳನ್ನು ನೋಂದಣಿ ಮಾಡಿ, ೬೭.೧೧ ಲಕ್ಷದ ಬಿಲ್ ಪಾವತಿಗೆ ಕ್ರಮ ವಹಿಸಲಾಗಿದೆ. ಭತಿಕ ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಅನುಷ್ಟಾನವಾಗದೇ ಇರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಕಾಮಗಾರಿಗಳನ್ನು ಅನುಷ್ಟಾನಗೊಳಿಸದೇ ಪಾವತಿಗೆ ಕ್ರಮ ವಹಿಸಿರುವುದು ವರದಿಯ ಮೂಲಕ ತಿಳಿದುಬಂದಿದ್ದು, ಫೆ.೧೧ರಂದು ಇಬ್ಬರೂ ಅಧಿಕಾರಿಗಳನ್ನು ಅಮಾನತುಗೊಳಿಸಿ ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಇಂದ್ರ.ಎA ಆದೇಶ ಹೊರಡಿಸಿದ್ದಾರೆ.
Megha News > Local News > ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ರಮ ತನಿಖೆಯಿಂದ ಬಯಲು: ಲಿಂಗಸೂಗುರು ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳು ಅಮಾನತ್
ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ರಮ ತನಿಖೆಯಿಂದ ಬಯಲು: ಲಿಂಗಸೂಗುರು ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳು ಅಮಾನತ್
Tayappa - Raichur20/02/2025
posted on

Leave a reply