ರಾಯಚೂರು. ಜಿಲ್ಲೆಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನಪ್ಪುತ್ತಿರುವ ಬೆನ್ನೆಲ್ಲೇ ಮನ್ಸಲಾಪೂರ ಕೆರೆಯ ಪಕ್ಷಿಧಾಮಕ್ಕೆ ದೇಶ ವಿದೇಶಗಳಿಂದ ವಲಸೆ ಬರುತ್ತಿರುವ ಪಕ್ಷಿಗಳಿಗೆ ಭೀತಿ ಎದುರಾಗಿದೆ.
ಇತ್ತೀಚೆಗೆ ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವಿನಪ್ಪುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಹಕ್ಕಿ ಜ್ವರದ ಭೀತಿ ಎದುರಾಗಿದೆ. ಪ್ರತಿದಿನ ಪಕ್ಷಿಗಳು ಸಾವಿನಪ್ಪುತ್ತಿರುವುದರಿಂದ ಪಶು ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಪಕ್ಷಿಗಳ ಕಳೆಬರವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದಾರೆ. ವರದಿ ಬಳಿಕ ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ.
ಮನ್ಸಲಾಪೂರ ಕೆರೆ ಪಕ್ಷಿಧಾಮವೆಂದು ಪ್ರಸಿದ್ಧಿಯಾಗಿದ್ದು, ಕೆರೆಗೆ ಪ್ರತಿವರ್ಷವೂ ದೇಶ ವಿದೇಶಗಳಿಂಧ ಪಕ್ಷಿಗಳು ವಲಸೆ ಬಂದು ನೆಲೆಯೂರುತ್ತಿವೆ. ನಾಲ್ಕೆöÊದು ತಿಂಗಳುಗಳ ಬಳಿಕ ಮರಳಿ ಹೋಗಲಿವೆ ಇನ್ನೂ ಕೆಲ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಗಮಿಸಿ ಮರಳಿ ತೆರಳದೇ ಇಲ್ಲಿಯೇ ಉಳಿಯುತ್ತವೆ.
ಮತ್ತೊಂದೆಡೆ ದೇಶ ವಿದೇಶಿಗಳಿಂದ ವಲಸೆ ಆಗಮಿಸುತ್ತಿರುವ ಪಕ್ಷಿಗಳಿಂದ ಹೊಸ ವೈರಸ್ ಬಂದಿರಬಹುದೆAದು ಊಹಿಸಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ವಿದೇಶಗಳಿಂದ ವಲಸೆ ಹಕ್ಕಿಗಳು ಆಗಮಿಸುವುದರಿಂದ ದೇಶಿ ಹಕ್ಕಿಗಳಿಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ನೆರೆಯ ತೆಲಂಗಾಣ, ಆಂದ್ರಪ್ರದೇಶ ಮತ್ತು ಮಹಾರಾಷ್ಟç ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಕೋಳಿ ಸಾಗಾಣೆಯನ್ನು ಸಹ ಆಯಾ ರಾಜ್ಯಗಳಲ್ಲಿ ನಿರ್ಬಂದಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ನಿರ್ಬಂಧ, ಮೇಲುಸ್ತುವಾರಿ ವ್ಯವಸ್ಥೆಯೂ ನಡೆದಿಲ್ಲ. ವಲಸಿಗ ಹಕ್ಕಿಗಳುಸೋಂಕಿತ ರಾಜ್ಯಗಳಿಂದ ಬರುವ ಸಾಧ್ಯತೆಗಳನ್ನು ಅಲ್ಲಗಳೆಲಾಗುವಿದಿಲ್ಲ. ವಲಸೆ ಹಕ್ಕಿಗಳ ಮೇಲೆ ನಿಗಾವಹಿಸಬೇಕಿದೆ.
* ಪಕ್ಷಿಗಳು ನಿಗೂಢವಾಗಿ ಸಾವಿನಪ್ಪುತ್ತಿರುವುದರಿಂದ ಮನ್ಸಲಾಪೂರ ಕೆರೆ ಪಕ್ಷಿಧಾಮಕ್ಕೆ ದೇಶ ವಿದೇಶಿಗಳಿಂದ ಬರುವ ವಲಸೆ ಹಕ್ಕಿಗಳಿಗೆ ಬೀತಿ ಎದುರಾಗಿದೆ, ಜಿಲ್ಲಾಡಳಿತ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ರುದ್ರಪ್ಪ, ಮನ್ಸಲಾಪೂರ, ಪಕ್ಷಿ ಪ್ರೇಮಿ