Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Feature ArticleLocal NewsPolitics NewsState News

ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ: ರಾಯಚೂರಿನಲ್ಲಿ ವರ್ತುಲ ರಸ್ತೆ, ವಿಮಾನ ನಿಲ್ದಾಣಕ್ಕೆ ೫೩ ಕೋಟಿ ರೂ ಅನುದಾನ

ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ: ರಾಯಚೂರಿನಲ್ಲಿ ವರ್ತುಲ ರಸ್ತೆ, ವಿಮಾನ ನಿಲ್ದಾಣಕ್ಕೆ ೫೩ ಕೋಟಿ ರೂ ಅನುದಾನ

ರಾಯಚೂರು: ಹಣಕಾಸುಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ೨೦೨೫-೨೬ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಅನೇಕ ಯೋಜನೆಗಳಿಗೆ ಅನುದಾನ ಘೋಷಿಸಿದ್ದಾರೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ೫೩ ಕೋಟಿ ರೂ, ಕಿದ್ವಾಯಿ ರೆಫರೆಲ್ ಆಸ್ಪತ್ರೆ, ರಾಯಚೂರು ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ, ತುಂಗಭದ್ರ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರೋದಗಿಸಲು ನವಲಿ ಬಳಿ ಜಲಾಶಯ, ಲಿಂಗಸೂಗೂರು ತಾಲೂಕ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಗೇರಿಸುವದು, ಜಿಟಿಜಿಟಿ ಕಾಲೇಜು ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ೫ ಸಾವಿರ  ಕೋಟಿ ರೂ ಅನುದಾನ ಘೋಷಣೆ,  ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಒಂದು ಸಾವಿರ ಕೋಟಿ ರೂ ಕಲ್ಯಾಣ ಪಥ  ಯೋಜನೆ ಜಾರಿ, ಕಲ್ಬುರ್ಗಿಯಲ್ಲಿ ಮೇಘಾ ಡೈರಿ ಪ್ರಾರಂಭಿಸಲು ೫೦ ಕೋಟಿ ರೂ, ೧೦ ಕೊಟಿ ರೂ ವೆಚ್ಚದಲ್ಲಿ ಸಹಕಾರಿ ಭವನ ನಿರ್ಮಾಣ, ಕೊಪ್ಪಳದ ಜಿಲ್ಲೆಯ ಬೂದುಗುಂಪಾದಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ಸ್ಥಾಪನೆ, ಕಲ್ಯಾಣ ಕರ್ನಾಟಕದಲ್ಲಿ ೬೦ ಕೋಟಿ ರೂ ವೆಚ್ಚದಲ್ಲಿ ಉಗ್ರಾಣಗಳ ನಿರ್ಮಾಣ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಡಿ ೨೦೦ ಕೋಟಿ ರೂ ವೆಚ್ಚದಲ್ಲಿ ಕೆಪಿಎಸ್ ಶಾಲೆಗಳನ್ನಾಗಿ ನಿರ್ಮಾಣ ಮಾಡಲು ೫೦ ಶಾಲೆಗಳ ಉನ್ನತೀಕರಣ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿಯಿರುವ ಖಾಲಿಯಿರುವ ೫೨೬೭ ಶಿಕ್ಷಕ ನೇಮಕಾತಿ. ಅಲ್ಲದೇಇನ್ನೂ ೫ ಸಾವಿರ ನೇಮಕಾತಿ ಕ್ರಮ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ೨೩ ಸಾವಿರ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ದಿಗೆ ೧೦ ಕೋಟಿ ರೂ ಅನುದಾನ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸಂಪೂರ್ಣ ಆರೋಗ್ಯ ವೃದ್ದಿಗೆ ೮೭೩ ಕೋಟಿ ರೂ ವೆಚ್ಚದ ಯೋಜನೆ ಜಾರಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಸ ಪೂರ್ವ ಮತ್ತು ನವಜಾತ ಶಿಶುಗಳಲ್ಲಿ ಚಯಾಪಚಯ ಖಾಯಿಲೆ ಪತ್ತೆ ಮತ್ತು ಗರ್ಭಕಂಠ ಕ್ಯಾನ್ಸರ್ ತಡೆಯಲು ೧೯ ಕೋಟಿ ರೂ  ಕಲ್ಬುರ್ಗಿಯಲ್ಲಿ ನಿಮ್ಹಾನ್ಸ್ ಮಾದಿಯ ಸಂಸ್ಥೆ, ಕೊಪ್ಪಳ ವೈಧ್ಯಕೀಯ ವಿಜ್ಞಾನ ಸಂಸೈಯ ಅಧೀನದಲ್ಲಿ ೧೦೦ ಕೋಟಿ ರೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ೫೦ ಕೋಟಿ ರೂ ವೆಚ್ಚದಲ್ಲಿ ರಾಯಚೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಯಲಬುರ್ಗಾ, ಜೇವರ್ಗಿ, ಯಾದಗಿರಿಯಲ್ಲಿ ೬ ಕೋಟಿ ರೂ ವೆಚ್ಚದಲ್ಲಿ ನರ್ಸಿಂಗ್ ಕಾಲೇಜು, ಬಳ್ಳಾರಿಯಲ್ಲಿ ಶ್ರವಣದೋಷವುಳ್ಳ ಮಕ್ಕಳ ಶಾಲೆ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರು ಗಳಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆ, ರಾಯಚೂರು ಸಿಂಧನೂರು ರಸ್ತೆ ಅಭಿವೃದ್ದಿಗೆ ೧೬೯೬ ಕೋಟಿ ರೂ ಕಾಮಗಾರಿ ವರ್ಷದೊಳಗೆ ಪೂರ್ಣ, ಪಿಎಂ ಮಿತ್ರ ಯೋಜನೆಯಡಿ ಕಲ್ಬುರ್ಗಿಯಲ್ಲಿ ಜವಳಿ ಪಾರ್ಕ, ಕಲ್ಬುರ್ಗಿಯಲ್ಲಿ ಪ್ಲಬ್ ಆಂಡ್ ಪೇ ಮಾದಿರಯಲ್ಲಿ ಫ್ಲಾಟ್ ಪ್ಲೋರ್ ಫ್ಯಾಕ್ಟರಿ ಸ್ಥಾಪನೆ, ಕೊಪ್ಪಳ ಜಿಲ್ಲೆಯ ಹೀರೆಹಳ್ಳ ಹೂಳೆತ್ತುವ ಕಾಮಗಾರಿ ೬೦ ಕೋಟಿ ರು,, ಕೊಪ್ಪಳ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ೫೦ ಕೋಟಿ ರೂ, ಕುಕನೂರು, ಕಾರಟಗಿ ತಾಲೂಕಿನಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆ ಭರವಸೆ ನೀಡಲಾಗಿದೆ.

Megha News