ರಾಯಚೂರು, ಮಾ.೭- ರಾಜ್ಯದ ಹಣಕಾಸು ಸಚಿವರೂ ಹಾಗೂ ಮುಖ್ಯಮಂತ್ರಿಗಳಾಗಿರುವ ಸಿದ್ದರಾನಯ್ಯನವರು ಮಂಡಿಸಿರುವ ಬಜೆಟ್ ಜನರ ದಾರಿತಪ್ಪಿಸುವ ಕೆಲಸವಾಗಿದೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ರಾಯಚೂರು ವಿಮಾನ ನಿಲ್ದಾಣಕ್ಕೆ ಹೊಸದಾಗಿ ೫೩ ಕೋಟಿ ರೂ ನೀಡುವದಿಲ್ಲ.ಈಗಾಗಲೇ ಹಣ ಪಿಡಿ ಖಾತೆಯಲ್ಲಿದೆ. ಆದರೂ ಮತ್ತೆ ಘೋಷಿಸಲಾಗಿದೆ. ವರ್ತುಲ ರಸ್ತೆ ಮತ್ತು ಟೆಕ್ಸ ಟೈಲ್ ಪಾರ್ಕ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗಲೇ ಘೋಷಿಸಲಾಗಿತ್ತು. ಕಲ್ಯಾಣ ಪಥ ರಸ್ತೆಗಳಿಗೆ ಹಣ ಕಳೆದ ವರ್ಷದಲ್ಲಿಯೂ ಘೋಷಣೆಯಾಗಿತ್ತು. ಕೆಕೆಆರ್ಡಬಿ ಅನುದಾನದಲ್ಲಿ ಆಸ್ಪತ್ರೆಗಳ ಮೇಲ್ದರ್ಜೆ ಹಳೆ ಪ್ರಸ್ತಾವನೆ. ಈಗ ಮತ್ತೆ ಘೋಷಣೆ ಮಾಡಲಾಗಿದೆ. ಸರ್ಕಾರದ ಬಳಿ ಅಭಿವೃದ್ದಿ ಯೋಜನೆಗೆ ಹಣವೇ ಇಲ್ಲ.ಕಳೆದ ವರ್ಷದ ಕೆಕೆ ಅರ್ ಡಿಬಿ ಅನುದಾನ ೫ ಸಾವಿರ ಕೋಟಿ ಬಿಡುಗಡೆಯೇ ಆಗಿಲ್ಲ. ಜನರನ್ಬು ದಾರಿತಪ್ಪಿಸಲು ಹಳೆ ಯೋಜನೆಗಳನ್ಬು ಘೋಷಿಸಲಾಗಿದೆ. ಘೋಷಣೆಯಾಗಿರುವ ಯೋಜನೆಗಳು ಜಾರಿಯಾಗುವದೇ ಅನುಮಾನವೆಂದರು.