ರಾಯಚೂರು,ಮಾ.೧೪- ಸಿಂಧನೂರು ತಾಲೂಕಿನಲ್ಲಿನಡೆದಿರುವ ಜೋಳ ಅಕ್ರಮ ಆರೋಪ ಎದುರಿಸುತ್ತಿರುವ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣ ಶಾವಂತಗೇರ ಇವರನ್ನು ಮಾತೃ ಇಲಾಖೆ ನಿಯುಕ್ತಿಗೊಳಿಸಿ ಸರಕಾರ ಆಧಿಸೂಚನೆ ಹೊರಡಿಸಿದೆ.
ರಾಜ್ಯ ಮಟ್ಟದ ತನಿಖಾ ತಂಡ ನೀಡಿರುವ ವರದಿ ಆಧಾರದ ಮೇಲೆ ಅಪಾದಿತರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಪಾದಿತರಲ್ಲಿ ಒಬ್ಬರಾಗಿರುವ ಕೃಷ್ಟ ಶಾವಂತಗೇರ ಮೂಲತಃ ಆರ್ಥಿಕ ಇಲಾಖೆಯರಾಗಿದ್ದರಿಂದ ಉಪ ನಿರ್ದೇಶಕ ಹುದ್ದೆಯಿಂದ ಬಿಡುಗಡೆಗೊಳಿಸಿ ಆಹಾರ ಇಲಾಖೆಯ ಅಧೀನ ಕಾರ್ಯದರ್ಶಿ ನರಸಿಂಹಮೂತಿ.ಸಿ.ಕೆ ಆದೇಶಿಸಿದ್ದಾರೆ.
ಸಿಂಧನೂರು ತಾಲೂಕಿನಲ್ಲಿ ಜೋಳಖರೀದಿ ಅಕ್ರಮದ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಪ್ರಶ್ಬಿಸಿದ್ದರು.