ರಾಯಚೂರು. ಹಳೆ ಧ್ವೇಷದ ಹಿನ್ನೆಲೆಯಲ್ಲಿ ಹಾಡು ಹಗಲೇ ವ್ಯಕ್ತಿಯೋರ್ವನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಭಂಗಿಕುಂಟದ ಅರ್‌ಕೆ ಲ್ಯಾಬ್ ಮುಂಭಾಗದಲ್ಲಿ ನಡೆದಿದೆ.
ಮೃತಪಟ್ಟರು ವ್ಯಕ್ತಿ ಬಬಲು(35) ವರ್ಷ ಎಂದು ತಿಳಿದು ಬಂದಿದೆ.
ಮೃತಪಟ್ಟರು ವ್ಯಕ್ತಿ ಎ1 ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇತ್ತೀಚಿಗೆ ಆಂದ್ರಪ್ರದೇಶದ ಗಟ್ಟು ಮಾಚರ್ಲಾದಲ್ಲಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಧ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಘಟನೆ ವಿವರ: ಭಂಗಿಕುಂಟದ ಪ್ರದೇಶದಲ್ಲಿ ನಿಂತಿದ್ದ ಮೃತ ಬಬಲುಗೆ ಚಾಕುವಿನಿಂದ ಇರಿಯಲಾಗಿದೆ.
ನಂತರ ಸ್ಥಳಕ್ಕೆ ಪೋಲಿಸರು ಹಾಗೂ ಮೃತ ಕುಟುಂಬದವರು ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಡಿವೈಎಸ್‌ಪಿ ಸತ್ಯ ನಾರಾಯಣ,
ಸದರ್ ಬಜಾರ್ ಪೋಲಿಸ್ ಠಾಣೆಯ ಸಿಪಿಐ ಉಮ್ಮೇಶ ಕಾಂಬ್ಳೆ ಪರಿಶೀಲನೆ ನಡೆಸಿದರು.
ಈ ಕುರಿತು ಸದರ್ ಬಜಾರ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.