ರಾಯಚೂರು, ಮಾ.೧೫- ಸೋನಾ ಮಸೂರಿ ಭತ್ತದ ತಳಿ ಅತಿಹೆಚ್ಚು ಬೆಳೆಯುವಪ್ರದೇಶವಾಗಿದ್ದು ರಾಷ್ಟçವ್ಯಾಪ್ತಿ ಮಾರಾಟ ವಿಸ್ತರಣೆಗೆ ಅನುಕೂಲವಾಗುವಂತೆ ಜಿಐ ಟ್ಯಾಗ್ ಪ್ರಸ್ತಾವನೆ ತಿರಸ್ಕೃತಗೊಂಡಿರುವದು ಬೆಳಕಿಗೆ ಬಂದಿದೆ.
ಕಲ್ಬುರ್ಗಿಯ ತೊಗರಿ, ಬಳ್ಳಾರಿಯ ಕಮಲಾಪುರು ಬಾಳೆಹಣ್ಣು, ಇಲಕಲ್ ಸೀರೆ ಸೇರಿದಂತೆ ೪೩ ಉತ್ಪನ್ನಗಳಿಗೆ ಜಿಐ ಟ್ಯಾಗ್ ದೊರೆತಿದೆ. ಸೋನಾಮಸೂರಿ ವಿಶೇಷವಾಗಿ ಬೆಳೆಯುವ ಪ್ರದೇಶದಿಂದ ಉತ್ಪನ್ನವಾಗುವ ಅಕ್ಕಿ ಮಾರಾಟಕ್ಕೆ ಅನುಕೂಲವಾಗಲೆಂದು ಜಿಐ ಟ್ಯಾಗ್ ಪಡೆಯಲು ಪ್ರಸ್ತಾವನೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಗಂಗಾವತಿ ಸಂಶೋಧನಾ ಕೇಂದ್ರ ಹಾಗೂ ಅಖಿಲ ಭಾರತ ಭತ್ತ ಸಂಯೋಜನೆ ಅಭಿವೃದ್ದಿ ಯೋಜೆ ವಿಜ್ಞಾನಿಗಳಿಂದ ಚೆನೈನ ಕೇಂದ್ರಕ್ಕೆ ಜಿಐ ಟ್ಯಾಗ್ ಅರ್ಜಿ ಸಲ್ಲಿಸಲಾಗಿತ್ತು. ಐಸಿಎಆರ್ ಭಾರತ ಭತ್ತ ಅಭಿವೃದ್ದಿ ಸಂಸ್ಥೆ ಹೈದ್ರಾಬಾದ್‌ನಿಂದ ೧೯೮೨ ರಲ್ಲಿ ಸೋನಾ ಮಸೂರಿ ತಳಿ ಅಭಿವೃದ್ದಿ ಪಡಿಸಿದ್ದರಿಂದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.
ಆಂದ್ರಪ್ರದೇಶದ ಗುಂಟೂರು ಆಚಾರ್ಯ ಎನ್.ಜಿ.ರಂಗ ಕೃಷಿ ವಿಶ್ವವಿದ್ಯಾಲಯ ಬಾಪಟ್ಲಾ ಕೃಷಿ ವಿಜ್ಞಾನ ಕೇಂದ್ರದಿAದ ಸೋನಾ ಮಸೂರಿ ತಳಿಯನ್ನು ಅಭಿವೃದ್ದಿಪಡಿಸಲಾಗಿದ್ದು,ರಾಯಚೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳ ವಾತಾವರಣಕ್ಕೆ ಹೊಂದಿಕೊAಡ ಉತ್ತಮ ಫಸಲು ನೀಡುತ್ತಿದೆ. ಅತಿಹೆಚ್ಚು ಉತ್ಪಾದನೆಯಾಗುವ ಸೋನಾಮಸೂರಿ ತಳಿ ದೇಶದಲ್ಲಿಯೇ ವಿಶೇಷ ಬೇಡಿಕೆಯನ್ನು ಸೃಷ್ಟಿಸಿದೆ. ಕರ್ನಾಟಕ ತಳಿಯಾಗದೇ ಇರುವದರಿಂದ ಜಿಐ ಟ್ಯಾಗ್ ಪ್ರಸ್ತಾವನೆ ರದ್ದುಗೊಳಿಸಲಾಗಿದೆ ಎಂದು ಕೃಷಿ ಸಚಿವರು ಬಹಿರಂಗಪಡಿಸಿದ್ದಾರೆ.
ಕಲ್ಬರ್ಗಿಯಿAದ ತೊಗರಿ ಬೆಳೆಗೆ ಜಿಐ ಟ್ಯಾಗ್ ದೊರೆತಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಜಿಐ ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ಮೌಲ್ಯ ಹೆಚ್ಚಳವಾಗುವ ಅವಕಾಶಗಳಿಂದ ಸೋನಾ ಮಸೂರಿವಂಚಿತವಾಗುವAತಾಗಿದೆ.
ಈ ಭಾಗದ ವಾತಾವರಣಕ್ಕೆ ಹೊಂದಿಕೊAಡAತೆ ಉತ್ಕೃಷ್ಟವಾದ ಅಕ್ಕಿಯನ್ನು ಬೆಳೆಯುತ್ತಿರುವ ರೈತರಿಗೆ ಬೆಲೆ ಏರಿಳಿತ ಸಮಸ್ಯೆಯನ್ನು ಸೃಷ್ಟಿಸಿದೆ. ತುಂಗಭದ್ರ ಮತ್ತು ಕೃಷ್ಣ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆಯುವ ಭತ್ತಕ್ಕೆ ಸೂಕ್ತ ಬೆಲೆ ಇಲ್ಲದೇ ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಎಲ್ಲಾ ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು, ಸರ್ಕಾರವೂ ಖರೀದಿಸಲಾಗದೇ ಇರುವಾಗ ಮಾರುಕಟ್ಟೆಯಲ್ಲಿ ಮೌಲ್ಯ ಹೆಚ್ಚಿಸುವ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.
ರಾಜ್ಯದಲ್ಲಿ ಪ್ರಥಮ: ೨೦೨೩-೨೪ ಸಾಲಿನಲ್ಲಿ ೪೬.೫೦ ಲಕ್ಷ ಟನ್ ಭತ್ತ ಉತ್ಪಾದನೆಯಾಗಿದೆ. ರಾಯಚೂರಿನಲ್ಲಿ ೧೧.೪೦ಲಕ್ಷ ಭತ್ತ ಉತ್ಪಾದನೆಯಾಗಿರುವದು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬಳ್ಳಾರಿಯಲ್ಲಿ ೫.೧೮ ಲಕ್ಷ ಟನ್, ಯಾದಗಿರಿಯಲ್ಲಿ ೪.೭೨ ಲಕ್ಷ ಟನ್, ಕೊಪ್ಪಳದಲ್ಲಿ ೪.೨೨ ಲಕ್ಷ ಟನ್ ಉತ್ಪಾದನೆಯಾಗಿದೆ. ಮೈಸೂರು, ಮಂಡ್ಯ, ದಾವಣಗೆರೆಗಳಲ್ಲಿಯೂ ಭತ್ತ ಬೆಳೆಯಲಾಗುತ್ತದೆ. ೨೦೨೪-೨೫ ಸಾಲಿನಲ್ಲಿ ಬೇಸಿಗೆ ಹಂಗಾಮಿನ ಬೆಳೆ ಹೊರತುಪಡಿಸಿ ೪.೨೨ ಲಕ್ಷ ಟನ್ ಭತ್ತ ಉತ್ಪಾದನೆ ನಿರೀಕ್ಷಿಸಲಾಗಿದೆ. ಭತ್ತದ ಬೆಳೆ ಉತ್ತಮ ಬೆಳೆ, ಮಾರುಕಟ್ಟೆ ಖಾತ್ರಿಇಲ್ಲದೇ ಹೋಗಿದೆ.
Megha News > Feature Article > ಸೋನಾ ಮಸೂರಿಗೆ ಜಿಐ ಟ್ಯಾಗ್ ಪ್ರಸ್ತಾವನೆ ತಿರಸ್ಕೃತ: ತಳಿಗೆ ಮೌಲ್ಯ ಹೆಚ್ಚಿಸುವ ಪ್ರಯತ್ನಕ್ಕೆ ಹಿನ್ನಡೆ
ಸೋನಾ ಮಸೂರಿಗೆ ಜಿಐ ಟ್ಯಾಗ್ ಪ್ರಸ್ತಾವನೆ ತಿರಸ್ಕೃತ: ತಳಿಗೆ ಮೌಲ್ಯ ಹೆಚ್ಚಿಸುವ ಪ್ರಯತ್ನಕ್ಕೆ ಹಿನ್ನಡೆ
Tayappa - Raichur16/03/2025
posted on

Leave a reply