ರಾಯಚೂರು,ಮಾ.೨೧- ನಗರದ ಸ್ಟೇಷನ ರಸ್ತೆಯ ಗುಡ್ ಶೆಡ್ ಏರಿಯ ನಿರ್ಜನ ಪ್ರದೇಶದಲ್ಲಿ ವೃದ್ದೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಸರಿ ಸುಮಾರು ೭೦ ವರ್ಷ ವಯೊವೃದ್ದಯನ್ನು ಅಪರಿಚಿತರು ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಜೆ ಪಶ್ಚಿಮ ಠಾಣೆಯ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೊಲೆಯಾದ ಮಹಿಳೆ ಹಾಗೂ ಕಾರಣ ತಿಳಿದು ಬಂದಿಲ್ಲ. ಶವವನ್ನು ಆಸ್ಪತ್ರೆ ಗೆ ಸಾಗಿಸಲಾಗಿದೆ