Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ವಿಶ್ರಾಂತಿ ಪಡೆಯುತ್ತಿವೆ ಕಸ ವಿಲೇವಾರಿಗೆ ಖರೀದಿಸಿ ಟ್ರಾಕ್ಟರ್‌ಗಳು

ವಿಶ್ರಾಂತಿ ಪಡೆಯುತ್ತಿವೆ ಕಸ ವಿಲೇವಾರಿಗೆ ಖರೀದಿಸಿ ಟ್ರಾಕ್ಟರ್‌ಗಳು

ರಾಯಚೂರು. ನಗರದ ಪ್ರತಿ ವಾರ್ಡ್ ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲು ಕಸ ವಿಲೇವಾರಿ ಟಾಟಾ ಏಸ್‌ಗಳು ಹಾಗೂ ಟ್ರಾಕ್ಟರ್‌ಗಳನ್ನು ಮಹಾನಗರ ಪಾಲಿಕೆಯಿಂದ ಖರೀದಿಸಲಾಗಿದ್ದು, ಆದರೆ ಟ್ರಾಕ್ಟರ್‌ಗಳು ಮಾತ್ರ ನಗರದ ಮಹಿಳಾ ಸಮಾಜದ ಬಯಲು ರಂಗಮಂದಿರದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ.

ಪಾಲಿಕೆಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಒಟ್ಟು ೧೬ ಟ್ರಕ್ಟರ್‌ಗಳನ್ನು ಖರೀದಿಸಲಾಗಿದ್ದು, ತಲಾ ಒಂದು ಟ್ರಾö್ಯಕ್ಟರನ್ನು೧೧.೫೦ ಲಕ್ಷ ರೂ.ವಚ್ಚದಲ್ಲಿ ಖರೀದಿಸಲಾಗಿದ್ದು, ಆದರೆ ಚಾಲಕರು ಮತ್ತು ಇತರೆ ಮಾನವ ಸಂಪನ್ಮೂಲಗಳಿಲ್ಲದ ಕಾರಣ ಟ್ರಾö್ಯಕ್ಟರ್‌ಗಳು ಬಳಕೆಯಾಗದೇ ನಿಂತಲ್ಲೆ ನಿಂತಿವೆ.
ಕೇವಲ ಟ್ರಾಕ್ಟರ್ ಮಾತ್ರವಲ್ಲದೇ ಪಾಲಿಕೆಯಿಂದ ಖರೀದಿಸಿದ್ದ ಕಸ ವಿಲೇವಾರಿ ಟಾಟಾ ಏಸ್ ವಾಹನಗಳು ಸಹ ರಾಂಪೂರು ಜಲಶುದ್ಧಿಕರಣ ಘಟಕದಲ್ಲಿ ನಿಲ್ಲಿಸಲಾಗಿದ್ದು, ಖರೀದಿಸಿ ವಾಹನಗಳು ಬಳಕೆಯಾಗದೇ ಇದ್ದಲ್ಲಿ ದುರಸ್ತಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಕೇವಲ ಖರೀದಿ ಮಾಡಿದ ವಾಹನಗಳನ್ನು ನಿಂತಲ್ಲೇ ನಿಲ್ಲಿಸುವುದರಿಂದ ಆರ್ಥಿಕ ಖರ್ಚು ತೋರಿಸಲಾಗುತ್ತಿದೆಯೇ ಹೊರತು ಆ ವಾಹನಗಳ ಬಳಕೆ ಆಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿವೆ.
ಪಾಲಿಕೆಯಿಂದ ಖರೀದಿಸಲಾದ ೧೬ ಟ್ರಾಕ್ಟರ್‌ಗಳ ಪೈಕಿ ಇದೀಗ ೧೧ ಟ್ರಾಕ್ಟರ್‌ಗಳು ಮಹಿಳಾ ಸಮಾಜದ ಆವರಣದಲ್ಲಿ ನಿಂತ ಸ್ಥಿತಿಯಲ್ಲಿ ಕಾಣಸಿಗುತ್ತವೆ. ಪಾಲಿಕೆಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಅನ್ವಯ ಉಳಿದ ೫ ಟ್ರಾಕ್ಟರ್‌ಗಳನ್ನು ವಾರ್ಡ್ಗಳಲ್ಲಿ ಕಸ ಸೇರಿದಂತೆ ಪಾಲಿಕೆಯ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಇಷ್ಟು ದಿನ ಬಾಡಿಗೆ ಟ್ರಾಕ್ಟರ್‌ಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಈಗಲೂ ಬಾಡಿಗೆ ಸಂಸ್ಕೃತಿ ಪಾಲಿಕೆಯಲ್ಲಿ ಮುಂದುವರೆದಿದೆ. ಸ್ವಂತ ವಾಹನಗಳು ಬಂದರೂ. ಬಾಡಿಗೆ ವಾಹನಗಳನ್ನು ಕೈಬಿಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವರೇ ಎಂಬ ಅನುಮಾನ ಮೂಡುತ್ತಿದೆ.
ಸಚಿವರಿಂದ ಉದ್ಘಾಟನೆ ಮಾಡಿಸಬೇಕೆಂಬ ಅಧಿಕಾರಿಗಳ ಆಸೆಯೂ ಟ್ರಾಕ್ಟರ್‌ಗಳನ್ನು ಉಪಯೋಗಿಸದೇ ಇರುವುದಕ್ಕೆ ಇನ್ನೊಂದು ಕಾರಣ ಎಂದು ಹೇಳಲಾಗಿದೆ. ಏನೇ ಆಗಲಿ ನಗರಸಭೆಯಿಂದ ಪಾಲಿಕೆಯಾದ ನಂತರ ಯಂತ್ರಗಳ ಖರೀದಿ, ಹೊಸ ಹೊಸ ಯೋಜನೆಗಳು, ವಿನೂತನ ಪ್ರಯತ್ನಗಳು ನಡೆಯುತ್ತಿದ್ದರೂ. ಟ್ರಾಕ್ಟರ್‌ಗಳ ನಿರುಪಯುಕ್ತತೆಯಂತಹ ಕೆಲವು ವಿಷಯಗಳಲ್ಲಿ ಅಧಿಕಾರಿಗಳು ತೋರುವ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ.
ಮಾ.೧೮ರಂದು ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಚೇರಿ ವಿಭಾಗಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಕಾರಣ ಹೆಚ್ಚುವರಿ ೧೩೬ ಸಿಬ್ಬಂದಿಗಳನ್ನು ನಿಯಮಾನುಸಾರ ನಿಯೋಜನೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಪ್ರಕಟಣೆ ಹೊರಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ತುರ್ತಾಗಿ ಪಾಲಿಕೆಗೆ ಚಾಲಕರನ್ನು ನೇಮಕ ಮಾಡಿಕೊಂಡು ಇರುವ ಟ್ರಾಕ್ಟರ್‌ಗಳನ್ನು ಬಳಕೆ ಮಾಡಿದ್ದಲ್ಲಿ ನಗರದ ಜನರಿಗೆ ಅನುಕೂಲವಾಗಲಿದೆ ಎಂಬುದು ಜನತೆ ಆಶಯ.

Megha News