ರಾಯಚೂರು,ಮಾ.೨೩- ನಗರದ ಪಾದಚಾರಿ ರಸ್ತೆ ಅತಿಕ್ರಮಿಸಿಕೊಂಡಿರುವದನ್ನು ತಿಂಗಳಾಂತ್ಯದೊಳಗೆ ತೆರವುಗೊಳಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೊಪಾತ್ರ ಸೂಚಿಸಿದರು. ಶನಿವಾರ ಸಂಜೆ ನಗರದ ತೀನ್ ಖಂದೀಲ್ ,ಮಹಾವೀರ ವೃತ್ತ, ಸ್ಟೇಷನ್ವರಸ್ತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿದರು. ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಅಪಘಾತಗಳು ನಡೆಯಲು ಕಾರಣವಾಗುತ್ತಿವೆ.ವ್ಯಾಪಾರ ವಹಿವಾಟುಮಾಡಿಕೊಳ್ಳಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕರಿಸಲು ಮನವಿ ಮಾಡಿದರು. ಯುಗಾದಿ ಮತ್ತು ರಂಜಾನ ಹಬ್ಬಗಳ ಆಚರಣೆ ನಂತರ ತೆರವು ಕಾರ್ಯ ನಡೆಸಲಾಗುತ್ತದೆ. ರಸ್ತೆಗೆ ಅಡ್ಡಲಾಗಿ,ಪಾದಚಾರಿ ರಸ್ತೆಗಳಲ್ಲಿ ಇರುವ ಅಂಗಡಿಗಳನ್ನು ತೆಗೆದು ಸಹಕಾರ ನೀಡಬೇಕೆಂದರು. ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆದು ಸಂಚಾರಕ್ಕೆ ಅಡ್ಡಿಯಾಗದಂತೆ ಆಯಾ ಪೊಲೀಸ್ ಠಾಣೆ ಗಳು ಗಮನ ಹರಿಸಬೇಕು.ಹಬ್ಬಗಳ ಹಿನ್ನಲೆಯಲ್ಲಿ ಜನ,ವಾಹನಬದಟ್ಟಣೆ ಹೆಚ್ಚಾಗಲಿದ್ದು ಸುಗಮ ಸಂಚಾರಕ್ಕೆ ವ್ಯಾಪಾರ ಸ್ಥರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಪುಟ್ಟ ಮಾದಯ್ಯ ಸೂಚಿಸಿದರಯ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ತೆರವುಗೊಳಿಸುವ ಸ್ಥಳಗಳನ್ನು ಗುರುತಿಸಲಾಯಿತು. ಪಾಲಿಕೆ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳಿದ್ದರು.
Megha News > Local News > ನಗರದಲ್ಲಿ ಪಾಲಿಕೆ ಆಯುಕ್ತ, ಎಸ್ಪಿ ವೀಕ್ಷಣೆ: ರಸ್ತೆ ಒತ್ತುವರಿ ತೆರವಿಗೆ ವಾರದ ಗಡವು