ರಾಯಚೂರು,ಮೇ.೨- ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿಗಳ ಕಚೇರಿ ಬಾಂಬ್ ಬೆದರಿಕೆ ಇ- ಮೇಲ್ ಸಂದೇಶ ರವಾನಿಸಲಾಗಿದೆ.
ಜಿಲ್ಲಾಧಿಕಾರಿ ಮೇಲ್ವ ಸಂದೇಶ ಬಂದಿದ್ದು ಮಾಹಿತಿ ಪಡೆಯುತ್ತಿದ್ದಂತೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಚೇರಿಯಿಂದ ಓಡಿ ಹೊರಬಂದರು. ಮಾಹಿತಿ ಪಡೆಯುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಕಚೇರಿ ತಪಾಸಣೆ ನಡೆಸುತ್ತಿದೆ. ಪೊಲೀಸರು ಮೆಲ್ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.