ರಾಯಚೂರು,ಜು.೧೩- ಕಳೆದ ಎರಡು ತಿಂಗಳಿನಿಂದ ತಾಲೂಕಿನ ಡೊಂಗರಾಂಪುರ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ರವಿವಾರ ಬೆಳಗಿನ ಜಾವ ಎರಡು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಚಿರತೆ ಪತ್ತೆಗೆ ಎರಡು ಬೋನು ಅಳವಡಿಸಿದ್ದ ಅರಣ್ಯ ಇಲಾಖೆ ಕ್ಯಾಮರ ಅಳವಡಿಸಿತ್ತಾದರೂ ಬಲೆಗೆ ಬಿದ್ದಿರಲಿಲ್ಲ. ಬೋನಿನ ಬಳಿ ಬಂದು ಹೋಗಿತ್ತು.ಮೇಕೆ,ನಾಯಿ ತಿಂದು ಹಾಕಿದ್ದ ಚಿರತೆ ವ್ಯಕ್ತಿಯೊಬ್ವರ ಮೇಲೆ ಧಾಳಿ ನಡೆಸಿತ್ತು. ಅದರೆ ವ್ಯಕ್ತಿ ತಪ್ಪಿಸಿಕೊಂಡು ಬಂದಿದ್ದರು. ಗ್ರಾಮಸ್ಥರು ನಿತ್ಯವೂ ಭಯದಲ್ಲಿ ಜನರು ಜೀವನ ನಡೆಸುವಂತಾಗಿತ್ತು. ಸೆರೆಯಾದ ಚಿರತೆಯನ್ನು ಬೇರೆಡೆ ಸಾಗಿಸಲು ಇಲಾಖೆ ಮುಂದಾಗಿದೆ. ಅರಣ್ತಾಧಿಕಾರಿ ರಾಜೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.ಸಿಬ್ಬಂದಿಗಳು ನಿರಂತರ ಶ್ರಮವಹಿಸಿದ್ದರು.