ರಾಯಚೂರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ಪಡೆದು ವಂಚನೆ ಮಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸಹಿಯನ್ನು ಫೋರ್ಜರಿ ಮಾಡಿದ ಅಲ್ತಾಫ್ ರಂಗಮಿತ್ರ ವಿರುದ್ದ ಎಫ್ಐಆರ್ ದಾಖಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ನಾಯಕ ನೀಡಿದ ದೂರಿನ ಮೇಲೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪ್ತಾಫ್ ರಂಗಮಿತ್ರ ಹಾಗೂ ರಂಗ ದಲಿತ ಸಾಂಸ್ಕೃತಿಕ ಸಂಘದ ಹೆಸರಿನಲ್ಲಿ ತಲಾ 3 ಲಕ್ಷ ಅನುದಾನ ಪಡೆದು ಕಾರ್ಯಕ್ರಮ ನಡೆಸದೆ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ.
ವಂಚನೆ ಮಾಡಿದ
ಅಲ್ತಾಫ್ ರಂಗಮಿತ್ರ ಮತ್ತು ಮುತ್ತಮ್ಮ ಎನ್ನುವ ವರ ಮೇಲೆ ಎಫ್ ಐ ಆರ್ ದಾಖಲಾಗಿದೆ.
2018-19 ನೇ ಸಾಲಿನಲ್ಲಿ ಅಲ್ತಾಫ್ ರಂಗಮಿತ್ರ ಸಂಸ್ಥೆ, ಎಚ್.ಐ.ಜಿ-9, ಕ.ಗೃ.ಮಂ. ಬಡಾವಣೆ, ಪೊತಗಲ್ ರಸ್ತೆ, ಯರಮರಸ್ ಕ್ಯಾಂಪ್, ರಾಯಚೂರು ಇವರಿಗೆ ರಾಯಚುರು ತಾಲ್ಲೂಕಿನ ಇಡಪನೂರು ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ರೂ.3.00 ಲಕ್ಷಗಳನ್ನು ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
ತಾಲ್ಲೂಕಿನ ಪಂಚಮುಖಿ ಗಾಣದಾಳ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು 3 ಲಕ್ಷ ರೂ. ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು, ಡಿ.1, 2019 ರಿಂದ ಡಿ.3 2019ರವರೆಗೆ ರಂಗ ದಲಿತ ಸಂಸ್ಥೆಯ ಕಾರ್ಯಕ್ರಮವನ್ನು ಅಲ್ತಾಫ್ ರಂಗಮಿತ್ರ ಸಂ ಸ್ಥೆಯು ಇಡಪನೂರು ಗ್ರಾಮದಲ್ಲಿ ನೆರವೇರಿಸಿದ ಬಗ್ಗೆ ಜಿಲ್ಲಾಧಿಕಾರಿಗಳು ರಾಯಚೂರು ಪತ್ರದಲ್ಲಿ ತಿಳಿಸಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪತ್ರದಲ್ಲಿ ತಿಳಿಸಿದ್ದು, ಪಂಚಮುಖಿ ಗಾಣದಾಳ ಮತ್ತು ಇಡಪನೂರು ಗ್ರಾಮದಲ್ಲಿ ಕಾರ್ಯಕ್ರಮಗಳನ್ನು ಮಾಡಿರು ವುದಾಗಿ ದಾಖಲೆಗಳನ್ನು ಸಲ್ಲಿಸಿದ್ದು, ಆದರೆ ಪಂಚಮುಖಿ ಗಾಣದಾಳದಲ್ಲಿ ಮಾತ್ರ ಕಾರ್ಯ ಕ್ರಮ ಮಾಡಿರುವುದು ಕಂಡು ಬಂದಿರುತ್ತದೆ. ಸಂಸ್ಥೆಗಳಿಗೆ ಪ್ರತ್ಯೇಕ ದಾಖಲೆಗಳೊಂದಿಗೆ ವಿವರಣೆ ನೀಡುವಂತೆ ನೀಡಿದ ನೋಟೀಸ್ ಗೆ ಅಲ್ತಾಫ್ ರಂಗಮಿತ್ರ ಸಂಸ್ಥೆಯು ಪ್ರತ್ಯೇಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಎರಡು ಸಂಸ್ಥೆಗಳು ಪ್ರತ್ಯೇಕ ದಿನಾಂಕ, ಪ್ರತ್ಯೇಕ ಸ್ಥಳಗ ಳಲ್ಲಿ ಕಾರ್ಯಕ್ರಮ ಏರ್ಪಡಿಸಿದೆಯೆಂದು ಜಿಲ್ಲಾ ಧಿಕಾರಿಗಳ ಕಚೇರಿಯಿಂದ ನೀಡಿದ ದೃಢೀಕರಣ ಪತ್ರದ ಆಧಾರದ ಮೇಲೆ ತಿಳಿಸಿದೆ. ಎರಡು ಸಂಸ್ಥೆಗಳು ವಂಚಿಸಿ ನೀಡಿರುವ ದಾಖಲೆಗಳು ಗಮನಕ್ಕೆ ಬಾರದೆ ಜಿಲ್ಲಾಧಿಕಾರಿಯವರ ಕಚೇರಿಯಿಂದ ದೃಡೀಕರಣ ನೀಡಲ್ಪಟ್ಟಿದೆ ಈ ಪತ್ರದ ಆಧಾರದ ಮೇಲೆ ಜಿಲ್ಲಾಧಿಕಾರಿಯವರ ಕಚೇರಿಯಿಂದ ನೀಡಲಾದ ನೋಟಿಸ್ ಗೆ ದಾಖಲೆಗಳನ್ನು ಸಲ್ಲಿಸದೆ, ಎರಡು ಸಂಸ್ಥೆಗಳು ತಮ್ಮ ಪಂಚನೆಯನ್ನು ಸರ್ಮಥಿಸಿಕೊಳ್ಳಲು ಪ್ರಯತ್ನಿಸಿದೆ. ರಂಗ ದಲಿತ ಸಂಸ್ಥೆಯು ನೋಟಿ ಸ್ ಗೆ ಯಾವುದೇ ಉತ್ತರವನ್ನು ನೀಡಿರುವುದಿಲ್ಲ.
ನಿಯಮಾನುಸಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಪಡೆದ ಸಂಸ್ಥೆಯು, ಸೇರಿ ಒಂದೇ ವೇದಿಕೆಯಲ್ಲಿ, ಒಂದೇ ಬ್ಯಾನರನಲ್ಲಿ ಕಾರ್ಯಕ್ರಮ ಮಾಡಿ ಖರ್ಚು ತೋ ರಿಸಿರುವುದು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದ ಬೇರೆ ಬೇರೆ ವೇದಿ ಕೆಯಲ್ಲಿ ಮಾಡಿದ ಕಾರ್ಯಕ್ರಮಗಳ ಛಾಯಾ ಚಿತ್ರಗಳನ್ನು ಲಗತ್ತಿಸಿರುವುದು ಸರ್ಕಾರಕ್ಕೆ ಮಾಡಿದ ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಈ ಹಿಂದೆ ಸುಳ್ಳು ದಾಖಲೆ ನೀಡಿ ವಂಚನೆ ಎಸಗಿರುವುದು ಕಂಡುಬಂದಿದೆ. ಹಣ ಬಳಕೆ ಪ್ರಮಾಣ ಪತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ದೃಢೀಕರಣ ರುಜು ಎಂದು ಪೋ ರ್ಜರಿ ಸಹಿ ಮಾಡಿ, ಸರಕಾರಿ ಅಧಿಕಾರಿಯ ಸಹಿಯನ್ನು ಪೋರ್ಜರಿ ಮಾಡಿರುವ ಈ ಎರಡು ಸಂಸ್ಥೆಗಳು ಇಲಾಖೆಯ ಮೊಹರನ್ನು ಸುಳ್ಳು ದಸ್ತಾವೇಜನ್ನು ಸೃಷ್ಟಿಸಿ ಬಳಸಿಕೊಂಡಿರುವುದು ಕಂಡುಬಂದಿದೆ.
ಅಲ್ತಾಫ್ ರಂಗಮಿತ್ರ ಹಾಗೂ ರಂಗದಲಿತ ಸಂಸ್ಥೆ ಯು ಈ ಹಿಂದೆ ನೀಡಿದ ದಾಖಲೆಗಳು ಪ್ರತ್ಯೇಕ ವಾಗಿರದೇ, ಎರಡು ಸಂಸ್ಥೆಗಳ ಹೆಸರಿನೊಂದಿಗೆ ಕ್ರೂಢೀಕರಿಸಿ ನೀಡಿರುವುದನ್ನು ಪರಿಶೀಲಿಸ ಲಾಗಿದೆ, ಎರಡು ಸಂಸ್ಥೆಗಳು ಸೇರಿ ಸುಮಾರು 6 ಲಕ್ಷ ರೂ ವಂಚಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಈ ಎರಡು ಸಂಸ್ಥೆಗಳ ಅಧ್ಯಕ್ಷರಾದ ಅಲ್ತಾಫ್ ರಂಗಮಿತ್ರ, ಮುತ್ತಮ್ಮರ ಮೇಲೆ ದೂರು ನೀಡಿದೆ ಎಂದು ಉಲ್ಲೇಖಿಸಿದ್ದಾರೆ.