ರಾಯಚೂರು. ರಾಸಾಯನಿಕ ತ್ಯಾಜ್ಯ ನೀರು ಮಿಶ್ರಿತ ಕೆಮಿಕಲ್ ನೀರನ್ನು ಕೆರೆ ಹಾಗೂ ಹಳ್ಳಗಳಿಗೆ ಸುರಿಯಲು ಯತ್ನಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ರಾಸಾಯನಿಕ ತ್ಯಾಜ್ಯ ನೀರು ಕೆಮಿಕಲ್ ಮಿಶ್ರಿತ ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ತಾಲೂಕಿನ ಯರಮರಸ್ ಕಡೆಯಿಂದ ಶಕ್ತಿನಗರ ಕಡೆಗೆ ತೆರಳುತ್ತಿದ್ದ ಕೆಎ 56-6760 ಸಂಖ್ಯೆಯ ಲಾರಿಯು ರಾಸಾಯನಿಕ ತ್ಯಾಜ್ಯ ನೀರು ಮಿಶ್ರಿತ ಕೆಮಿಕಲ್ ನೀರನ್ನು ಕೆರೆ ಹಾಗೂ ಹಳ್ಳ ಸೇರಿದಂತೆ ಇತರೆಡೆ ಸುರಿಯಲು ತೆಗೆದುಕೊಂಡು ಹೋಗುತ್ತಿದ್ದು ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವದಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸರು ದಾಳಿ ನಡೆಸಿ ರಾಸಾಯನಿಕ ತ್ಯಾಜ್ಯ ನೀರು ಮಿಶ್ರಿತ ಕೆಮಿಕಲ್ ಸಾಗಾಣೆ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಸಾಯನಿಕ ತ್ಯಾಜ್ಯ ನೀರು ಮಿಶ್ರಿತ ಕೆಮಿಕಲ್ ವಿಷ ಪದಾರ್ಥವನ್ನು ಮಾನವ ಜೀವಕ್ಕೆ ಅಪಾಯಕಾರಿಯಾಗಿದೆ.ಜನ, ಜಾನುವಾರುಗಳು, ಕೆರೆಯ ಜಲಚರಗಳಿಗೆ ಕಂಟಕವಾಗಿದೆ, ಪರಿಸರಕ್ಕೂ ಹಾನಿಕಾರವಾಗಿದೆ.
ಪ್ರಕರಣ ದಾಖಲಿಸಿಕೊಂಡು ವಾಹನ ಚಾಲಕ, ಮಾಲೀಕ ಮತ್ತು ಕಾರ್ಖಾನೆಯ ಮಾಲಿಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.