ರಾಯಚೂರು. ತಾಲೂಕಿನ ಶ್ರೀರಾಮನಗರ ಕ್ಯಾಂಪ್ನ ಸರ್ಕಾರಿ ಶಾಲೆಯ ಮಕ್ಕಳಿಗೆ ಮಕ್ಕಳ ದಿನಾಚರಣೆ ನಿಮಿತ್ತ ನಾರಾಯರೆಡ್ಡಿ ದಂಪತಿಗಳು ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಮಾಡಿ ಮಕ್ಕಳಿಗೆ ತಾವೆ ಬಡಿಸಿ ನಂತರ ತಾಂಬೂಲ ವಿತರಣೆ ಮಾಡಿದರು.
ಪ್ರತಿ ವರ್ಷ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಭೋಜನದ ವ್ಯವಸ್ಥೆ ಮಾಡುತ್ತಿದ್ದು, ಈ ವರ್ಷವೂ ಸಹ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದರು.
ಶಾಲೆಯಲ್ಲಿರುವ 75 ಹೆಚ್ಚು ಅಧಿಕ ಮಕ್ಕಳಿಗೆ ಪ್ರತಿ ಮಕ್ಕಳಿಗೆ ತಾಂಬೂಲ, 11 ರೂ, ಮತ್ತು ಬಾಲೇಹಣ್ಣು, ನೀಡಿದರು.
ಈ ಸಂದರ್ಭದಲ್ಲಿ ನಾರಾಯರೆಡ್ಡಿ ದಂಪತಿಗಳು, ಶಾಲೆಯ ಮುಖ್ಯ ಗುರು ಲಲಿತ, ಶಿಕ್ಷಕ ಮಹಾಂ ತೇಶ್ ಬಿರಾದಾರ, ಸವಿತಾ ಶಿಕ್ಷಕ, ಹಾಗೂ ಸು ರೇಂದ್ರ ರೆಡ್ಡಿ, ಅಡುಗೆ ಸಹಾಯಕರಾದ ಪ್ರಸನ್ನ, ನರಸಮ್ಮ, ಅಂಜಿನಮ್ಮ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.