ರಾಯಚೂರು. ಮೊಸಳೆಯೊಂದು ಮಾವಿನಕೆರೆ ಯಲ್ಲಿ ಪ್ರತ್ಯೇಕ್ಷವಾಗಿ ಸುತ್ತಮುತ್ತಲಿನ ನಿವಾಸಿಗ ಳು ಭಯಭೀತರನ್ನಾಗಿ ಮಾಡಿತ್ತು, ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿದ್ದಾರೆ.
ನಗರದ ಮಾವಿನಕೆರೆಯಲ್ಲಿ ಮೊಸಳೆ ಕಂಡು ಬಂದಿದ್ದರಿಂದ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಎಚ್ಚೆತ್ತು ಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮಾವಿನಕೆರೆಗೆ ದೈಡಾಯಿಸಿ, ಕೆರೆಯಲ್ಲಿರುವ ಮೊಸಳೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು, ಮೊಸಳೆ ಪ್ರತ್ಯೇಕವಾಗಿರುವ ಮಾಹಿತಿ ಖಚಿತಪಡಿಸಿ ಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ತೆಪ್ಪದ ಮೂಲಕ ಕೆರೆಯಲ್ಲಿ ಇಳಿದು ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಸಳೆ ಸೆರೆ ಹಿಡಿದಿದ್ದರಿಂದ ನಿವಾಸಿಗಳಲ್ಲಿ ಆತಂಕ ಮರೆಯಾಗಿದೆ, ಮೊಸಳೆಯನ್ನು ಇದೀಗ ಸ್ಥಳಾಂತರ ಮಾಡಿದ್ದಾರೆ.