ಬೆಂಗಳೂರು: ಹೊಸ ವರ್ಷಕ್ಕೆ ಒಂದು ದಿನ ಮುಂಚೆ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. 37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಈ ಪೈಕಿ ಕೆಲವರಿಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ 46 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾ ಗಿದ್ದು, ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವಿಶೇಷ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿ ಎಂಟಿ ಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
ಕಮಲ್ ಪಂತ್-ಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ನೇಮಕಾತಿ ವಿಭಾಗ
ಅಲೋಲ್ ಕುಮಾರ್- ಎಡಿಜಿಪಿ – ಕರ್ನಾಟಕ ರಸ್ತೆ ಸುರಕ್ಷತಾ ವಿಭಾಗದ ವಿಶೇಷ ಆಯುಕ್ತ
ಸೀಮಂತ್ ಕುಮಾರ್ ಸಿಂಗ್-ಎಡಿಜಿಪಿ-ಬಿಎಮ್‌ಟಿಎಫ್
ಹರಿಶೇಖರನ್ ಎಡಿಜಿಪಿ -ಹೋಂ ಗಾರ್ಡ್ ಹಾಗೂ ಸಿವಿಲ್ ಡಿಫೆನ್ಸ್
ನಂಜುಂಡಸ್ವಾಮಿ ಎಡಿಜಿಪಿ-ಅಗ್ನಿಶಾಮಕ ಮತ್ತು ತುರ್ತು ಸೇವೆ
ಚಂದ್ರಗುಪ್ತಾ (ಐಜಿಪಿ)- ಬೆಂಗಳೂರು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ
ತ್ಯಾಗರಾಜನ್- ದಾವಣಗೆರೆ ಪೂರ್ವ ವಲಯ ಐಜಿಪಿ
ಅಮಿತ್ ಸಿಂಗ್- ಮಂಗಳೂರು ಪಶ್ಚಿಮ ವಲಯ ಐಜಿಪಿ
ವೈ ಎಸ್ ರವಿಕುಮಾರ್ – ಡಿಐಜಿ, ಇಂಟಲಿಜೆನ್ಸ್
ಶಂತನು ಸಿನ್ಹಾ, ದಿವ್ಯಾ ಗೋಪಿನಾಥ್, ಸುಧೀರ್ ಕುಮಾರ್ ರೆಡ್ಡಿ, ಆರ್.ಚೇತನ್, ವರ್ತಿಕಾ ಕಟಿಯಾರ್, ಕಾರ್ತಿಕ್ ರೆಡ್ಡಿ, ಕುಲ್ದೀಪ್ ಕುಮಾರ್ ಜೈನ್, ವಿನಾಯಕ್ ವಸಂತರಾವ್ ಪಾಟೀಲ್, ಕೆ.ಸಂತೋಷ್ ಬಾಬು, ಇಶಾ ಪಂತ್, ಸೀಮಾ ಲಾಟ್ಕರ್, ರೇಣುಕಾ ಕೆ. ಸುಕುಮಾರ್, ಡಾ.ಸಿರಿ ಗೌರಿ, ಎಂ.ಪುಟ್ಟ ಮಾದಯ್ಯ, ಟಿ.ಶ್ರೀಧರ, ಡಾ.ಸಂಜೀವ್ ಎಂ ಪಾಟೀಲ್, ಸುಮನ್ ಡಿ ಪೆನ್ನೇಕರ್, ರವೀಂದ್ರ ಕಾಶೀನಾಥ್ ಗಡಾಡಿ ಸೇರಿ 37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.