Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ದೇವದುರ್ಗ ಶಾಸಕಿ ಕರಿಯಮ್ಮ ನಾಯಕ ನೇತೃತ್ವದ ಜೆಡಿಎಸ್ ಮುಖಂಡರ ನಿಯೋಗ ರಿಮ್ಸ್ ಅಸ್ಪತ್ರೆಗೆ ಭೇಟಿ: ಬಾಣಂತಿಯರ ಸಾವಿನ ಪ್ರಕರಣದ ತನಿಖೆ ನಡೆಸಲು ಸರಕಾರ ಮುಂದಾಗಲು ಆಗ್ರಹ

ದೇವದುರ್ಗ ಶಾಸಕಿ ಕರಿಯಮ್ಮ ನಾಯಕ ನೇತೃತ್ವದ  ಜೆಡಿಎಸ್ ಮುಖಂಡರ ನಿಯೋಗ ರಿಮ್ಸ್ ಅಸ್ಪತ್ರೆಗೆ ಭೇಟಿ: ಬಾಣಂತಿಯರ ಸಾವಿನ ಪ್ರಕರಣದ ತನಿಖೆ ನಡೆಸಲು ಸರಕಾರ ಮುಂದಾಗಲು ಆಗ್ರಹ

ರಾಯಚೂರುಜ.೯- ಜಿಲ್ಲೆಯಲ್ಲಿ ನಡೆದಿರುವ ಬಾಣಂತಿಯರ ಸಾವು ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು, ತಾಯಿ ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದು ರಕ್ಷಣೆಗೆ ಮುಂದಾಗಬೇಕೆಂದು ದೇವದುರ್ಗ ಶಾಸಕಿ ಜಿ.ಕರಿಯಮ್ಮ ನಾಯಕ ಆಗ್ರಹಿಸಿದರು.
ಅವರಿಂದು ಪಕ್ಷದ ಮುಖಂಡರ ನಿಯೋಗದೊಂದಿಗೆ ರಿಮ್ಸ್ ಆಸ್ಪತ್ರೆಗೆ ಬೇಟಿ ನೀಡಿ ಬಾಣಂತಿಯರಿಗೆ ನೀಡುತ್ತಿರುವ ಚಿಕಿತ್ಸೆ,ಸೌಲಭ್ಯಗಳ ಕುರಿತು ನಲಮಾಹಿತಿ ಪಡೆದರು.
ನಂತರ ವೈಧ್ಯರೊಂದಿಗೆ ಬಾಣಂತಿಯರ ಸಾವಿಗೆ ಕಾರಣ ಕುರಿತು ಮಾಹಿತಿ ಪಡೆದರು.ವೈಧ್ಯರು ಮಾಹಿತಿ ನೀಡಿ ಗರ್ಬಿಣಿಯರು ನಿರಂತರವಾಗಿ ತಪಾಸಣೆ ಪಡೆಯುವದಿಲ್ಲ‌ಪರಸ್ಥಿತಿ ಕೈ ಮೀರಿದ ನಂತರ ಆಸ್ಪತ್ರೆಗೆ ದಾಖಲಾಗುತ್ತಾರೆ. ಬೇರೆ ಆರೋಗ್ಯ ಸಮಸ್ಯೆಗಳಿಂದ ಘಟನೆ ನಡೆಯುತ್ತಿವೆ.ವೈದ್ಯರ ನಿರ್ಲಕ್ಷ ಕಾರಣವಲ್ಲ ಎಂದರು.
ದೇವದುರ್ಗತಾಲೂಕಿನಲ್ಲಿ ಮೂರು ಜನರ ಸಾವಿನ ಪ್ರಕರಣ ನಡೆದಿವೆ. ಕುಟುಂಬಸ್ಥರು ಚಿಕಿತ್ಸೆ ದೊರಕಿಲ್ಲ ಎಂದು ಅರೋಪಿಸುತ್ತಿದ್ದಾರೆ. ಕೇವಲ ವೈದ್ಯರನ್ನು ಹೊಣೆ ಮಾಡುವ ಉದ್ದೆಶವಿಲ್ಲ. ಸಾವಿಗೆ ಕಾರಣ ತಿಳಿದು ಅಮಾಯಕರ ರಕ್ಷಿಸಬೇಕಿದೆ ಎಂದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿ ಬಾಣಂತಿಯರ ಸಾವು ಕೇವಲ
ಸರಕಾರಿ ಅಸ್ಪತ್ರೆಗಳಲ್ಲಿ ನಡೆಯುತ್ತಿದೆ.ಸರಕಾರ ಸಮಗ್ರ ತನಿಖೆ ನಡೆಸಿ ಜೀವ ಉಳಿಸಬೇಕಿದೆ.ಬಳ್ಳಾರಿ ಮತ್ತು ಸಿಂಧನೂರನಲ್ಲಿ ನಡೆದ ಸಾವಿನ ಪ್ರಕರಣಗಳಲ್ಲಿ ಔಷಧಿ ಕಾರಣವೆಂದು ಹೇಳಲಾಗಿದೆ .ಅದೇ ಘಟನೆ ಜಿಲ್ಲೆಯಲ್ಲಿ ನಡೆಯದಂತೆ ಗಮನಹರಿಸಬೇಕಿದೆ.ಬಾಣಂತಿಯರ ಸಾವಿನಿಂದ ಅನಾಥವಾಗಿರುವ ಮಕ್ಕಳ ರಕ್ಷಣೆ ಸರಕಾರ ಮುಂದಾಗಬೇಕು.ಸರಕಾರ ಗಮನಕ್ಕೆ ತರಲಾಗುತ್ತದೆ.ಪಕ್ಷದ ವರಿಷ್ಟರ ಗಮನಕ್ಕೆ ತಂದು ಮುಂದಿನ ಹೋರಾಟ ನಿರ್ಧರಿಸಲಾಗುತ್ತದೆ.ಪ್ರಚಾರಕ್ಕೆ ಬೇಟಿ ನೀಡಿಲ್ಲ ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಕಾರ್ಯಾಧ್ಯಕ್ಷ ಎನ್.ಶಿವ ಶಂಕರ ಸೇರಿದಂತೆ ತಾಲೂಕ ಮುಖಂಡರುಗಳಿದ್ದರು.

Megha News