ಮಾನ್ವಿ : ತಾಲೂಕಿನ ಪೋತ್ನಾಳ ಹಳ್ಳವು ಬಹುತೇಕ ಭಾಗಗಳಿಗೆ ನೀರೊದಗಿಸುವ ನೀರಿನ ಮೂಲವಾದ ಈ ಪೋತ್ನಾಳ ಹಳ್ಳ ಸಂಪೂರ್ಣ ಬತ್ತಿ ಹೋಗಿದ್ದು, ಜನ – ಜಾನುವಾರುಗಳು ಪರದಾಡುವಂತಾಗಿದೆ.
ಈ ವರ್ಷದಲ್ಲಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿಯೂ ಬರಗಾಲ ಪರಿಸ್ಥಿತಿ ಮುಂದುವರಿದಿದ್ದು, ಗ್ರಾಮೀಣ ಭಾಗಗಳ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಜನ-ಜಾನು ವಾರುಗಳು ಸಮಸ್ಯೆ ಅನುಭವಿಸು ವಂತಾಗಿದೆ. ಸರ್ಕಾರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಕೊಟ್ಯಂತರ ರೂ ಚೆಲ್ಲುತ್ತಿದ್ದರೂ ಯೋಜನೆಗಳ ಅನುಷ್ಠಾನದ ವೈಫಲ್ಯ ಹಳ್ಳಿಗರನ್ನು ಕುಡಿಯುವ ನೀರಿಗಾಗಿ ಅಲೆಯುವುದನ್ನು ಮಾತ್ರ ತಪ್ಪಿಸಿಲ್ಲ. ಕೊಡ ನೀರಿಗಾಗಿ ಜನ ನಿತ್ಯ ಅಲೆದಾಡುವಂತಾಗಿದೆ.