Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಆಧಾರ್ ಕಾರ್ಡ್‌ನಲ್ಲಿ ಚಿಕ್ಕ ವಯಸ್ಸಿನ ಫೋಟೋ ಇದೆ ಎಂಬ ಕಾರಣಕ್ಕೆ ಉಚಿತ ಪ್ರಯಾಣಕ್ಕೆ ನಿರಾಕರಣೆ: ಹಣ ನೀಡಿ ಟಿಕೇಟ್ ಪಡೆದು ಪ್ರಯಾಣಿಸಿದ ಬಾಲಕಿ

ಆಧಾರ್ ಕಾರ್ಡ್‌ನಲ್ಲಿ ಚಿಕ್ಕ ವಯಸ್ಸಿನ ಫೋಟೋ ಇದೆ ಎಂಬ ಕಾರಣಕ್ಕೆ ಉಚಿತ ಪ್ರಯಾಣಕ್ಕೆ ನಿರಾಕರಣೆ: ಹಣ ನೀಡಿ ಟಿಕೇಟ್ ಪಡೆದು ಪ್ರಯಾಣಿಸಿದ ಬಾಲಕಿ

ರಾಯಚೂರು. ಮಹಿಳೆಯರಿಗೆ ಶಕ್ತಿ ಯೋಜನೆ ಯಡಿಯಲ್ಲಿ ಉಚಿತ ಪ್ರಯಾಣಕ್ಕಾಗಿ ಅವಕಾಶ ನೀಡದೇ ಹಣ ಪಡೆದು ಟಿಕೇಟ್ ನೀಡಿ ಬಸ್ ಕಂಡಕ್ಟರ್ ಮಹಿಳೆಯರ ಮೇಲೆ ದರ್ಪ ತೋರಿದ ಘಟನೆ ನಡೆದಿದೆ.

ಮಹಿಳೆಯರಿಗಾಗಿ ರಾಜ್ಯದಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿತ್ತು, ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಕಾರ್ಡ್ ತೋರಿಸಿದರೆ ಸಾಕು ಬಸ್ ನಿರ್ವಾಹಕರು ಉಚಿತ ಟಿಕೆಟ್ ನೀಡುವಂತೆ ಸರ್ಕಾರ ಆದೇಶ ನೀಡಿದೆ, ಇಲ್ಲಿಯವರೆಗೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿ ಸುತ್ತಿದ್ದರು, ಆದರೆ ಆಧಾರ್ ಕಾರ್ಡ್‌ ನಲ್ಲಿ ಬಾಲಕಿಯ ಪೋಟೋ ಚಿಕ್ಕ ವಯಸ್ಸಿನದ್ದು ಎನ್ನುವ ಕಾರಣಕ್ಕೆ ಬಾಲಕಿ ಮೇಲೆ ಬಸ್ ಕಂಡಕ್ಟರ್ ದರ್ಪ ತೋರಿಸಿದ್ದಾರೆ.
ಆಧಾರ್ ಕಾರ್ಡ್ ತೋರಿಸಿದರೂ ಹಣ ನೀಡು ವಂತೆ ಬಲವಂತವಾಗಿ ಟಿಕೆಟ್ ನೀಡಿದ್ದಾರೆ, ಲಿಂಗ ಸುಗೂರು ತಾಲೂಕಿನ ಮುದಗಲ್ ಮಾರ್ಗವಾಗಿ ತೆರಳುತ್ತಿದ್ದ ಬಸ್ ನಲ್ಲಿ ಘಟನೆ ನಡೆದಿದೆ.
ಲಿಂಗಸುಗೂರು ನಿಂದ ಇಲಕಲ್ ತೆರಳುತ್ತಿದ್ದ ಬಸ್ ನಂಬರ್ KA 36- F 1646 ಎಂದು ಟಿಕೇಟ್ ನಲ್ಲಿ ನಮೂದಿಸಲಾಗಿದೆ.
ಬಸ್ ಹತ್ತಿದ ಬಾಲಕಿ ಆಧಾರ್ ಕಾರ್ಡ್ ತೋರಿಸಿ ದ್ದಾರೆ, ಆಧಾರ್ ಕಾರ್ಡ್ ನಲ್ಲಿ ಭಾವಚಿತ್ರ ಚಿಕ್ಕ ವಯಸ್ಸಿನದಾಗಿದೆ ಎನ್ನುವ ಕಾರಣಕ್ಕೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದಲ್ಲ ಎಂದು ಟಿಕೆಟ್ ಪಡೆಯಲು ಒತ್ತಡ ಹಾಕಿದ್ದಾರೆ. ಆದರೆ ಬಾಲಕಿಯ ಬಳಿ ಹಣವಿಲ್ಲದೆ ಇರುವುದರಿಂದ ಮುಜುಗರ ಉಂಟಾಗಿದೆ.
ಸಂಬಂಧಿಕರಿಗೆ ಕರೆ ಮಾಡಿದ ಬಾಲಕಿ ತನ್ನ ಬಳಿ ಹಣ ಇಲ್ಲ ಆಧಾರ್ ಕಾರ್ಡ್ ನಡೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಪೋನ್ ಪೇ ಮೂಲಕ ಹಣ ಪಾವತಿ ಮಾಡುವುದಾಗಿ ಬಾಲಕಿಯ ಸಿಬ್ಬಂದಿ ಹೇಳಿದರೂ ಕೇಳದೆ ನಡು ರಸ್ತೆಯಲ್ಲಿ ಇಳಿಸಲು ಮುಂದಾಗಿದ್ದರು,
ಮುದಗಲ್‌ನಲ್ಲಿ ಬಸ್ ಇಳಿಯುತ್ತಿದ್ದು, ಪರಿಚಯ ಸ್ಥರಿಂದ ಹಣ ಕೇಳಿ ನೀಡುವುದಾಗಿ ಹೇಳಿದ ನಂತರ ನಿರ್ವಾಹಕಿ ಬಾಲಕಿಯ ಪ್ರಯಾಣಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಆಧಾರ್ ಕಾರ್ಡ್ ಮೊಬೈಲ್‌ನಲ್ಲಿ ತೋರಿಸಿದರೂ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಆದೇಶ ಕುರಿತು ಮಾತನಾಡಿದ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಅಧಿಕಾರಿಗಳ ಬಗ್ಗೆ ಅವಹೇಳನಕಾರಿ ಮಾತಾಡಿದ ನಿರ್ವಾಹಕಿ ಅಸಭ್ಯ ವರ್ತನೆ ಮಾಡಿದರು ಎಂದು ಸಹ ಪ್ರಯಾಣಿಕರು ಆರೋಪಿಸಿದರು.

Megha News