ರಾಯಚೂರು:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಡಿ ಮಾಹಿತಿಗಾಗಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ ಪರಿಹಾರ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಾರ್ವಜನಿಕರು ಒಂದೇ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಮತ್ತು ಕುಂದುಕೊರತೆ ನಿವಾರಣೆಗಾಗಿ ವಿಭಿನ್ನ ಸಹಾಯವಾಣಿಗಳನ್ನು ಸಂಪರ್ಕಿಸುವುದು Pಷ್ಟÀ್ಟವಾಗುತ್ತಿದೆ. ಆದ್ದರಿಂದ ಈ ಎರಡು ಸಹಾಯವಾಣಿಯನ್ನು ರದ್ದುಗೊಳಿಸಿ ಮಹಾತ್ಮಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯ ಹಾಗೂ ಇತರೆ ಪಂಚಾಯತ್ ರಾಜ್ ಯೋಜನೆಗಳ ಮಾಹಿತಿಗಾಗಿ ಏಕೀಕೃತ ಸಹಾಯವಾಣಿ; ೮೨೭೭೫೦೬೦೦೦ನ್ನು ಸ್ಥಾಪಿಸಲಾಗಿರುತ್ತದೆ. ಈ ನೂತನ ಏಕೀಕೃತ ಸಹಾಯವಾಣಿ ಬಗ್ಗೆ ತಾಲ್ಲೂಕ ಮಟ್ಟದಲ್ಲಿ ಕೆಳಕಂಡAತೆ ವ್ಯಾಪಕ ಜನಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿರುತ್ತದೆಂದು ರಾಯಚೂರು ಜಿ.ಪಂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಹುಲ್ ತುಕಾರಾಮ ಪಾಂಡ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೂಲಿಕಾರರಿಗೆ ವಿತರಿಸಿದ ಉದ್ಯೋಗ ಚೀಟಿಗಳನ್ನು ಅಪಡೇಟ್ ಮಾಡುವಾಗ ಉಚಿತ ಸಹಾಯವಾಣಿ ಸ್ಥಳದಲ್ಲಿ ಕಡ್ಡಾಯವಾಗಿ ಏಕೀಕೃತ ಸಹಾಯವಾಣಿ ಸಂಖ್ಯೆಯನ್ನು, ಹಾಗೆಯೇ ಕರಪತ್ರಗಳಲ್ಲಿ ಏಕೀಕೃತ ಸಹಾಯವಾಣಿ ಸಂಖ್ಯೆಯನ್ನು ನಮೂದಿಸಿ ವಿತರಿಸುವುದು,
ನರೇಗಾ ಕಾಮಗಾರಿ ಸ್ಥಳದಲ್ಲಿ ಆಳವಡಿಸುವ ಹೊಸ (ಸಿಐಬಿ) ಮೇಲೆ ಕಡ್ಡಾಯವಾಗಿ ಏಕೀಕೃತ ಸಹಾಯವಾಣಿ ಸಂಖ್ಯೆಯನ್ನು ಬರೆಸುವುದು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ಬರೆಸಿರುವ ಗೋಡೆ ಬರಹಗಳಲ್ಲಿ ಪರಿಹಾರ/ನರೇಗಾ ಉಚಿತ ಸಹಾಯವಾಣಿ ಸಂಖ್ಯೆ ಇರುವ ಕಡೆ ಏಕೀಕೃತ ಸಹಾಯವಾಣಿ ಸಂಖ್ಯೆಯನ್ನು ಮಾತ್ರ ಬರೆಸುವುದು. ತಾಲ್ಲೂಕು ಮಟ್ಟದಿಂದ ಗ್ರಾಮಪಂಚಾಯಿತಿಗಳಿಗೆ ಹೊರಡಿಸುವ ಪತ್ರ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಏಕೀಕೃತ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.