ರಾಯಚೂರು : ಜಿಲ್ಲೆಯಲ್ಲಿ ಈಗಾಗಲೇ ಭಾರೀ ಸದ್ದು ಮಾಡಿರುವ ದರ್ವೇಶ್ ಗ್ರೂಪ್ ಮಾದರಿಯಲ್ಲಿಯೇ ಜಿಲ್ಲೆಯ ಗ್ರಾಮಾಂತರದ ಭಾಗದಲ್ಲಿ ಹಣ ದುಪ್ಪಟ್ಟು ಮಾಡುವ ಆನ್ ಲೈನ್ ಆ್ಯಪ್ ನಿಂದಲೂ ಕೋಟ್ಯಾಂತರ ಹಣ ಕಳೆದುಕೊಂಡಿರುವ ಬಗ್ಗೆ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಭರ್ಜರಿ ಚರ್ಚೆಯಾಗುತ್ತಿದೆ.
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತಿಗೆ ಸಾಕ್ಷಿ ಎಂಬಂತೆ ಹಣ ದುಪ್ಪಟ್ಟು ಆಗುವುದಾಗಿ ನಂಬಿ ಜಿಲ್ಲೆಯ ಗ್ರಾಮಾಂತರದ ಭಾಗದಲ್ಲಿ ಸಾವಿರಾರು ಯುವಕರು ಲಕ್ಷಾಂತರ ಹಣವನ್ನು ಹಾಕಿ ಕಳೆದುಕೊಂಡಿರುವ ಬಗ್ಗೆ ಭರ್ಜರಿಯಾಗಿ ಚರ್ಚೆಯಾಗುತ್ತಿದೆ.
ಕಡಿಮೆ ಹಣ ಹೂಡಿಕೆ ಮಾಡಿ , ದುಪ್ಪಟ್ಟು ಹಣ ಗಳಿಸಬಹುದು ಎಂಬಂತಹ ಹಲವಾರು ಯೂಟ್ಯೂಬ್ ವೀಡಿಯೋ ಸಹಿತ ಲಿಂಕ್ ಇರುವಂತಹ ಸಂದೇಶ ನಂಬಿ ಹಲವಾರು ಯುವಕರು ಹಣವನ್ನು ವಿನಿಯೋಗಿಸಿದ್ದರು ಆರಂಭದಲ್ಲಿ 500 , 1000 ಹಣ ಹಾಕಿದಾಗ ಹಾಕಿದ ಹಣ ಮರಳಿ ಹಿಂತಿರುಗಿಸಲಾಗಿದೆ ನಂತರದಲ್ಲಿ ಯಾವಾಗ ಈಸಣ್ಣ ಹಣ ದುಪ್ಪಟ್ಟಾಯಿತೋ ಈ ಸುದ್ದಿ ಭರ್ಜರಿಯಾಗಿ ವೈರಲ್ ಆಗಿ ಯುವಕರು ಹಣ ವಿನಿಯೋಗಿಸಿದರು. ಆದರೆ ಕಳೆದ ಜುಲೈ 4 ರಂದು ಏಕಾಏಕಿ ಈ ಆ್ಯಪ್ ಮಾಯವಾಗಿದ್ದು ಹಣ ಹೂಡಿದೆ ಮಾಡಿದ ಯುವಕರು ಮಾತ್ರ ಪರಿಪರಿಯಾಗಿ ಗೋಳಾಡುವಂತಾಗಿದೆ.
ಟ್ರೇಡಿಂಗ್ ಮೂಲಕ ಎಂಟ್ರಿ ನಂತರ ಭರ್ಜರಿ ಪಂಗನಾಮ : QLOF ಎಂಬಂತಹ ಟ್ರೇಡಿಂಗ್ ಆ್ಯಪ್ ಇದರಲ್ಲಿ ಹಣ ವಿನಿಯೋಗಿಸಿದರೆ ಭಾರೀ ಲಾಭ ಬರುತ್ತೆ ಎಂಬಂತಹ ನಕಲಿ ಸುದ್ದಿಯನ್ನು ಮೊದಲು ಕಂಪನಿ ಹರಿದಾಡಿತು ಯಾವಾಗ ಯುವಕರು ಮೊದಲಿಗೆ ಟ್ರಯಲ್ ಮಾಡಲು 6000 ಸಾವಿರ ಹಣವನ್ನು ಹಾಕುತ್ತಿದ್ದಂತೆ ಪ್ರತಿ ರಾತ್ರಿ 8:30 ವರೆಗೆ ಒಂದು ಸಂದೇಶ ರವಾನಿಸುವ ಮೂಲಕ ನಿಮ್ಮ ಹಣ ಒಂದು ಪಟ್ಟು ಹೆಚ್ಚಾಗಿದೆ ಇನ್ನು ಹಣ ಹೂಡಿ ಎಂಬಂತಹ ಸಂದೇಶ ಬರುತ್ತದೆ. ನಂತರ ಆ ಸಂದೇಶವನ್ನು ಮೂವರಿಗೆ ಹಂಚಿ ಅವರು ಕೂಡ ಆ ಆ್ಯಪ್ ನ್ನು ಇನ್ ಸ್ಟಾಲ್ ಮಾಡಿಕೊಂಡರೆ ಅವರಿಗೂ ಆ ಸಂದೇಶ ಕಳಿಸಿದವರಿಗೂ ಕೂಡ ಹಣ ಬಂದಂತಹ ಸಂದೇಶ ಬರುತ್ತಿತ್ತು . ಪ್ರಾರಂಭದಲ್ಲಿ ಒಂದು ಭಾಗ ಹಣವನ್ನು ಡ್ರಾ ಮಾಡಲು ಅವಕಾಶವನ್ನು ನೀಡಲಾಗಿತ್ತು. ಯಾವಾಗ ಈ ಆ್ಯಪ್ ಜಿಲ್ಲೆಯಾದ್ಯಂತ ಭರ್ಜರಿ ವೈರಲ್ ಆಗಿ ಯುವಕರು ಲಕ್ಷಾಂತರ ಹಣ ವಿನಿಯೋಗಿಸಿದರೋ ಆಗ ಆ್ಯಪ್ ಅನ್ನೇ ಆನ್ ಲೈನ್ ನಿಂದ ಕಾಣೆಯಾಗುವಂತೆ ಮಾಡಲಾಯಿತು. ಇದರಿಂದ ಗೊಂದಲಕ್ಕೆ ಒಳಗಾದ ಯುವಕರು ಗೂಗಲ್ ಸೇರಿದಂತೆ ಹಲವು ಕಡೆ ಈ ಆ್ಯಪ್ ಕುರಿತು ವಿಚಾರಿಸಲು ಮುಂದಾದಾಗ ತಿಳಿಯಿತು ಇದೊಂದು ಮೋಸದ ಆ್ಯಪ್ ಎಂಬಂತಹ ವಿಚಾರ ತಿಳಿಯಿತು. ಆದರೆ ಈ ಹಣ ದುಪ್ಪಟ್ಟು ಮಾಡುವ ಆ್ಯಪ್ ನಲ್ಲಿ ಮಾತ್ರ ಎಸ್.ಎಸ್.ಎಲ್.ಸಿ ಓದುವ ಯುವಕನಿಂದ ಹಿಡಿದು 50 ರ ಹರೆಯದ ಗ್ರಾಮೀಣ ಭಾಗದ ಮುಗ್ಧ ಯುವಕರು ಭರ್ಜರಿಯಾಗಿ ಹೋಗಿರುವ ಘಟನೆ ಜರುಗಿತು. ಆದರೆ ಈ ಕುರಿತಂತೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದು ಮಾತ್ರ ಸೋಜಿಗವೇ ಸರಿ.