ರಾಯಚೂರು. ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡಿದಿದ್ದು ಇಬ್ಬರಿಗೆ ಕಾಲು ಮುರಿದ ಘಟನೆ ನಗರ ಹೊರ ವಲಯದ ಬೈಪಾಸ್ ನಲ್ಲಿ ಘಟನೆ ಜರುಗಿದೆ.
ಬೈಕ್ ಸವಾರ ಸಿದ್ದರಾಮಪ್ಪ ಗೌಡ ಮತ್ತು ತಮ್ಮ ಮಗಳು ಇಬ್ಬರು ಕಾಲು ಮುರಿದು ಹೋಗಿದೆ, ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಇವರು ಮನ್ಸಲಾಪೂರ ಗ್ರಾಮದವರೆಂದು ತಿಳಿದು ಬಂದಿದೆ.
ಲಾರಿ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಆಗಿಯೇ ಹೋಗಿದ್ದಾನೆ.
ಬೆಳಗ್ಗೆ ಮನ್ಸಲಾಪೂರ ಗ್ರಾಮದಿಂದ ದೇವಸೂಗುರು ಸೂಗುರೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯ ಯರಮರಸ್ ಬೈಪಾಸ್ ನಲ್ಲಿ ಹಿಬಂದಿಯಿಂದ ವೇಗವಾಗಿ ಬಂ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೆ ಕಾಲು ಮುರಿದು ಹೋಗಿದ್ದು, ಮತ್ತೋರ್ವರಿಗೆ ಗಾಯಗಳಾಗಿವೆ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.