ಸಿಂಧನೂರು. ನಗರಕ್ಕೆ ಕುಡಿಯುವ ನೀರಿಗಾಗಿ ನಿರ್ಮಿಸಿದ ಕೆರೆಯೊಂದರಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾ ಲ್ಲೂಕಿನ ವಣಗೇರಿ ಗ್ರಾಮದ ಲಂಕೇ ಹನಮಪ್ಪ ಸಗರಪ್ಪ ಮೇಟಿ (70) ಎಂದು ತಿಳಿದು ಬಂದಿದೆ.
ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ, ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪಿಎಸ್ಐ ಹುಸೇನಪ್ಪ ತಿಳಿಸಿದ್ದಾರೆ