Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಆಯುಕ್ತಾಲಯ ಅಧಿಕಾರಿಗಳ ತಂಡದಿಂದ ನರೇಗಾ ಪ್ರಗತಿ‌ ಪರಿಶೀಲನೆ, ಚಂದ್ರಬಂಡಾ ಗ್ರಾಮಕ್ಕೆ ಭೇಟಿ ಬೂದು ನಿರ್ವಹಣೆ ಸ್ಥಳ ವೀಕ್ಷಣೆ – ಸಿಒಒ ಪಿಜಿ ವೇಣುಗೋಪಾಲ

ಆಯುಕ್ತಾಲಯ ಅಧಿಕಾರಿಗಳ ತಂಡದಿಂದ ನರೇಗಾ ಪ್ರಗತಿ‌ ಪರಿಶೀಲನೆ, ಚಂದ್ರಬಂಡಾ ಗ್ರಾಮಕ್ಕೆ ಭೇಟಿ ಬೂದು ನಿರ್ವಹಣೆ ಸ್ಥಳ ವೀಕ್ಷಣೆ – ಸಿಒಒ ಪಿಜಿ ವೇಣುಗೋಪಾಲ

ರಾಯಚೂರು: ನ.22 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಆಯುಕ್ತಾಲಯ ಬೆಂಗಳೂರು, ಮಾನ್ಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು (ಪ್ರ) ಶ್ರೀ ಪಿಜಿ ವೇಣುಗೋಪಾಲ ಇವರ ಅಧ್ಯಕ್ಷತೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಲಾಯಿತು.

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾನವ ದಿನಗಳ ಸೃಜನೆ, ಸಾಮಾಜಿಕ ಲೆಕ್ಕ ಪರಿಶೋಧನೆ, ಪ್ರಕರಣಗಳ ಆಧಾರ್ ಸ್ಥಿತಿ, ರಿಜೆಕ್ಟ್ ಟ್ರಾನಜೆಕ್ಷನ್, ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ, ಜಿಯೋ ಟ್ಯಾಗ್, ಏರಿಯಾ ಆಫೀಸರ್ ವರದಿ, ಬೂದು ನೀರು ನಿರ್ವಹಣೆ ಘಟಕ, ಸಿ.ಎಫ್.ಪಿ ಕ್ಲಸ್ಟರ್ ಸೌಲಭ್ಯ ಯೋಜನೆ, ಇನ್ನೂ ಅಮೃತ ಸರೋವರ 2.0 ಕಾಮಗಾರಿಗಳನ್ನು ಸ್ಥಳ ಗುರುತಿಸುವಿಕೆ ಹಾಗೂ ಇನ್ನೀತರ ವಿಷಯಗಳ ಕುರಿತು ಪ್ರಗತಿ ಪರಿಶೀಲನೆಯನ್ನು ಹಮ್ಮಿಕೊಳ್ಳಲಾಯಿತು.
ಅದ ನಂತರ ಚಂದ್ರಬಂಡ ಗ್ರಾಮದಲ್ಲಿ ಆಶ್ರಯ ಕಾಲೋನಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿರ್ಮಾಣ ಮಾಡಿರುವ ಕಂಪೌಂಡ್ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಕಟ್ಲೇಟ್ಕೂರು ಗ್ರಾಮದಲ್ಲಿರುವ ನೀರು ನಿಲ್ಲುವ ಸ್ಥಳಗಳನ್ನು ವೀಕ್ಷಿಸಿ, ಸದರಿ ನೀರು‌ ನಿಲ್ಲುವ ಕಡೆ ಯಾವ ರೀತಿ ಚರಂಡಿ, ಇಂಗು ಗುಂಡಿಗಳನ್ನು ನಿರ್ಮಾಣ ಮಾಡಬೇಕೆಂದು ತಿಳಿಸಿದರು..
ನಂತರ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಸಂಜೀವಿನಿ ಶೇಡ್ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಪ್ರತಿಯೊಂದು ಕಾಮಗಾರಿಯನ್ನು ಉತ್ತಮವಾಗಿ ನಿರ್ಮಾಣ ಮಾಡಲು ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಯೋಜನಾ‌ ನಿರ್ದೇಶಕರು ಶ್ರೀ ಶರಣಬಸವರಾಜ ಕೆಸರಟ್ಟಿ, ಕಾರ್ಯನಿರ್ವಾಹಕ ಅಭಿಯಂತರರು (ಪಂ.ರಾ) ಇಲಾಖೆ ಶ್ರೀ ವೆಂಕಟೇಶ ಗಲಗ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕರು (ಗ್ರಾ.ಉ), ಆಯುಕ್ತಾಲಯದ ಪ್ರಾಜೆಕ್ಟ್ ಇಂಜಿನಿಯರ್ ಅಭಿರಾಮ್, ಹಾಗೂ ಜಿಐಎಸ್ ಸಂಯೋಜಕ ಆದರ್ಶ, ಎಡಿಪಿಸಿ ಮಲ್ಲಮ್ಮ, ಡಿಎಂಐಎಸ್ ವೆಂಕಟೇಶ, ಸಿಎಫ್ ಪಿ, ತಾಂತ್ರಿಕ ಸಂಯೋಜಕರು, ಎಮ್‌ಐಎಸ್, ಅನುಷ್ಠಾನ ಇಲಾಖೆ ತಾಂತ್ರಿಕ‌ ಸಹಾಯಕರು, ಹಾಗೂ ಕಛೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Megha News