ರಾಯಚೂರು ಡಿ. 3:- ತಾಲೂಕಿನ ಇಡಪನೂರು ಗ್ರಾಮದ ಹತ್ತಿರ ಹತ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಒಂದು ಪಲ್ಟಿಯಾಗಿ ಭಾರಿ ಅನಾಹುತ ತಪ್ಪಿದ ಘಟನೆ ಜರುಗಿದೆ.
ಗ್ರಾಮದಿಂದ ರಾಯಚೂರು ನಗರಕ್ಕೆ ಅತಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಟ್ರಾಕ್ಟರ್ ಟ್ರ್ಯಾಲಿ ವಿದ್ಯುತ್ ಕಂಬಕ್ಕೆ ತಾಗಿ ರಸ್ತೆಯಲ್ಲಿ ಉರಳಿ ಬಿದ್ದಿದೆ.
ಟ್ರ್ಯಾಕ್ಟರ್ ಉರುಳಿ ಬಿದ್ದ ಕಾರಣ ಕೆಲ ಸಮಯದವರೆಗೂ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರ ನೆರವಿನೊಂದಿಗೆ ಟ್ರ್ಯಾಕ್ಟರ್ ಜೆಸಿಬಿ ಮೂಲಕ ಎತ್ತಿ ಸಂಚಾರ ಸುಗಮಗೊಳಿಸಲಾಯಿತು.
ಟ್ರ್ಯಾಕ್ಟರ್ ಎತ್ತಲು ಟ್ರಾಕ್ಟರನಲ್ಲಿ ತುಂಬಿದ ಹತ್ತಿ ರಸ್ತೆಯಲ್ಲಿರಾಶಿಬಿದ್ದಿದೆ. ಟ್ರ್ಯಾಲಿ ಎತ್ತಿ ಸಂಚಾರ ಸುಗಮಗೊಳಿಸಲಾಯಿತು. ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಡ್ರೈವರ್ ಚಮತ್ಕಾರ ರೀತಿಯಲ್ಲಿ ಪಾರಾಗಿದ್ದಾನೆ.
Megha News > Local News > ಇಡಪನೂರು ಬಳಿ ಟ್ರಾಕ್ಟರ ಪಲ್ಟಿ: ಸಂಚಾರಕ್ಕೆ ಅಡ್ಡಿ
ಇಡಪನೂರು ಬಳಿ ಟ್ರಾಕ್ಟರ ಪಲ್ಟಿ: ಸಂಚಾರಕ್ಕೆ ಅಡ್ಡಿ
Tayappa - Raichur03/12/2024
posted on
Leave a reply