Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಎ.ವಸಂತಕುಮಾರ್ ರವರಿಗೆ ಹೈಕಮಾಂಡ್ ಸಚಿವಾನ ಸ್ಥಾನ ನೀಡಿ

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಎ.ವಸಂತಕುಮಾರ್ ರವರಿಗೆ ಹೈಕಮಾಂಡ್ ಸಚಿವಾನ ಸ್ಥಾನ ನೀಡಿ

ರಾಯಚೂರು,ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಎ.ವಸಂತಕುಮಾರ್ ರವರಿಗೆ ಮುಂದಿನ ದಿನಗಳಲ್ಲಿ ನಿಮ್ಮ ಸಾಮರ್ಥ್ಯ ಪರಿಗಣಿಸಿ ಹೈಕಮಾಂಡ್ ಸಚಿವಾನ ಸ್ಥಾನ ನೀಡಬೇಕೆಂದು ಶ್ರೀ ಆದಿಜಾಂಬವ ಮಹಾ ಸಂಸ್ಥಾನ ಮಠ ಕೋಡಿಹಳ್ಳಿ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಹರಿಜನವಾಡದ ಸಮುದಾಯ ಭವನದ ಆವರಣದಲ್ಲಿ ಹರಿಜನವಾಡ ನಾಗರೀಕರ ವೇದಿಕೆಯಿಮದ ನೂತನ ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್ ರವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಹೈಕಮಾಂಡ್ ವಸಂತ ಕುಮಾರ್ ರವರಿಗೆ ಸಚಿವ ಸ್ಥಾನ ನೀಡಬೇಕು. ರಾಜಕೀಯ ಕ್ಷೇತ್ರದಲ್ಲಿರುವವರು ಎಲ್ಲಾ ಜಾತಿ, ಜನಾಂಗದ ಸಮುದಾಯದವರೊಂದಿಗೆ ನಿರಂತರ ಸಂಪರ್ಕ, ಪ್ರೀತಿಯೊಂದಿಗೆ ಬೇರತಾಗ ಮಾತ್ರ ರಾಜಕಾರಣಿಯಾಗಲು ಸಾಧ್ಯ ಮತ್ತು ಸ್ಥಾನಮಾನಗಳು ಸಹ ಸಿಗಲಿದೆ ಎನ್ನುವದಕ್ಕೆ ವಸಂತಕುಮಾರ್ ರವರು ಕಾರಣ. ವಸಂತ ಕುಮಾರ್ ಇಂದು ಎಲ್ಲಾರೊಂದಿಗೆ ಉತ್ತಮ ಬಾಂಧ್ಯವ ಹೊಂದಿದ್ದಾರೆ. ಈ ಭಾಗದ ದೀಮಂತ ನಾಯಕ ಆರ್.ಅಚಿಜನೇಯಲು ಅವರ ಪುತ್ರರಾದ ವಸಂತ ಕುಮಾರ್ ರವರು ಪಕ್ಷಕ್ಕೆ ಸೇವೆ ಸಲ್ಲಿಸಿರುವದನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿರುವುದು ಇಡೀ ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಖುಷಿ,ಸಂತಸದ ಸಂಗತಿಯಾಗಿದೆ.
ವಸಂತ ಕುಮಾರ್ ರವರ ತಂದೆಯವರು ಈ ಸಂದರ್ಭದಲ್ಲಿ ಇದಿದ್ದರೆ ಎಷ್ಟು ಸಂತಸ ಪಡೆತಿದ್ದರು ಏನು. ಆದರೆ ಇಡೀ ಹರಿಜನವಾಡವೇ ಇಂದು ಸಂಭ್ರಮ ಪಡುವಂತಾಗಿದೆ ಎಂದರು.
ವಸಂತ ಕುಮಾರ್ ರವರು ಒಂದೊಂದು ಮೆಟ್ಟಿಲು ಹತ್ತಲು ಹಲವಾರು ಅಡ್ಡಿ ಆತಂಕಗಳನ್ನು ಎದುರಿಸಿದ್ದಾರೆ. ಹರಿಜನವಾಡದಿಂದ ವಿಧಾನಸೌಧದ ಮೆಟ್ಟಿಲು ಹತ್ತಲು ದಾರಿಯುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮಾದಿಗ ಜನಸಂಖ್ಯೆ ಹೊಂದಿರುವ ಹರಿಜನವಾಡದಿಂದ ರಾಜಕೀಯ ರಂಗ ಪ್ರವೇಶಿಸಿದ ವಸಂತ ಕುಮಾರ್ ರವರಿಗೆ ಈ ಸ್ಥಾನಮಾನ ಈ ಹಿಂದೆ ಸಗಬೇಕಾಗಿತ್ತು.
ಆದರೆ ರಾಜಕೀಯದಲ್ಲಿ ಕಾಲು ಎಳೆಯುವವರು ಜಾಸ್ತಿ. ಸಾರ್ವಜನಿಕ ಸೇವೆಯಲ್ಲಿ ಇರುವವರಿಗೆ ತಾಳ್ಮೆ, ಬುದ್ದಿವಂತೆಕೆ ಇದ್ದಾಗ ಮಾತ್ರ ಒಬ್ಬ ಯಶಸ್ವಿ ರಾಜಕಾರಣಿಯಾಗಲು ಸಾಧ್ಯ ಎನ್ನುವದಕ್ಕೆ ವಸಂತ ಕುಮಾರ್ ರವರು ನಿರ್ದೇಶನಾವಗಿದೆ ಎಂದರು. ಹರಿಜನವಾಡ ವಸಂತ ಕುಮಾರ್ ರವರಿಗೆ ರಾಜಕೀಯ ಶಕ್ತಿ ಕೇಂದ್ರವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ರವರು ಹರಿಜನವಾಡ ಬಡಾವಣೆಯು ನನ್ನ ಜನ್ಮಭೂಮಿ ಮತ್ತು ಕರ್ಮಭೂಮಿ ಎಂದರು. ನಮ್ಮ ತಂದೆಯವರಿಂದ ನಮ್ಮ ಕುಟುಂಬವು ರಾಜಕೀಯ ಜೀವನ ನೀಡಿರುವುದು ಹರಿಜನವಾಡ. ನಾನು ಇಂದು ಅಭಿನಂದನಾ ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಜನ್ಮ ಸಾರ್ಥಕವಾಯಿತು. ನಾನು ಇಡೀ ರಾಜಕೀಯ ಜೀವನದ ಉದ್ದಕ್ಕೂ ಪಕ್ಷ ಸಂಘಟನೆ, ಹೋರಾಟ, ಯುವಕರನ್ನು ರಾಜಕೀಯವಾಗಿ ಬೆಳೆಸುವುದರತ್ತ ಹೆಚ್ಚಿನ ಒಲವು ತೋರಲಾಗಿದೆ. ಇಡೀ ರಾಜ್ಯದ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಾದಿಗ ಜನಸಂಖ್ಯೆಯನ್ನು ಹೊಂದಿರುವುದು ಹರಿಜನವಾಡ ಬಡಾವಣೆಯಲ್ಲಿ. ಇಂತಹ ಬಡಾವಣೆಯಲ್ಲಿ ನಾನು ಜನಿಸಿ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿರುವುದು ಪುಣ್ಯದ ಕೆಲಸ ಎಂದರು.
ನನಗೆ ಸಿಕ್ಕಿರುವ ಈ ಸ್ಥಾನಮಾನವು ನನ ಅದೃಷ್ಠ. ನನಗೆ ಸಿಕ್ಕಿರುವ ಸ್ಥಾನಮಾನ ನಿಮ್ಮಗೆ ಮುಡಿಪಾಗಿಡುವೆ. ನಾನೊಬ್ಬನೇ ಎಂಎಲ್‌ಸಿ ಅಲ್ಲ ಇಡೀ ಹರಿಜನವಾಡವೇ ಎಂಎಲ್‌ಸಿ.
ಹರಿಜನವಾಡದಿಂದ ನನ್ನ ರಾಜಕೀಯ ಜೀವನ ಪ್ರಾರಂಭವಾಗಿದೆ.
ನನ್ನ ತಂದೆಯವರಿಗೆ ಸಹ ರಾಜಕೀಯ ಜನ್ಮ ನೀಡಿದ್ದು ಹರಿಜನವಾಡ. ನಮ್ಮ ಸಮುದಾಯವರು ಶ್ರೀಮಂತರಲ್ಲ. ಉದ್ಯಮಿಗಳಲ್ಲ. ಕೂಲಿ ನಾಲಿ ಮಾಡಿ ಜೀವನ ನಡೆಸುವುದು. ಪೌರಕಾರ್ಮಿಕರಾಗಿ, ಬಾಂಬೆ ಕಂಪನಿಯಲ್ಲಿ ಕೆಲಸ ಮಾಡಿ ಪ್ರತಿನಿತ್ಯ ಕುಟುಂಬವನ್ನು ಪೋಷಣೆ ಮಾಡಲಾಗುತ್ತದೆ. ಹರಿಜನವಾಡ ಬಡಾವಣೆ ರಾಜಕೀಯ ಶಕ್ತಿ ಕೇಂದ್ರವಾಗಿದೆ ಎಂದರು. ಹರಿಜನವಾಡ ಇಲ್ಲ ಅಂದರೆ ನಾನು ಇಲ್ಲ. ನಮ್ಮ ತಂದೆಯವರು ಹರಿಜನವಾಡ ಬಡಾವಣೆಗೆ ಮಾತ್ರ ಸೀಮಿತರಾಗದೆ ನಾಯಕರಾಗಿ ಹೊರ ಹೊಮ್ಮಿ ಉತ್ತಮ ರಾಜಕೀಯ ಪಟ್ಟುವು ಆಗಿದ್ದರು ಎಂದರು.
ರಾಜಕೀಯದಲ್ಲಿ ಅನೇಕ ಏಳು ಬೀಳುಗಳನ್ನು ಎದುರಿಸಿದ್ದೇನೆ. ನನ್ನಲ್ಲಿರುವ ಶಕ್ತಿ ಸಾಮರ್ಥ್ಯ, ಅನುಭವ ಇದ್ದರು ಸಹ ರಾಜಕೀಯದಲ್ಲಿ ದುಷಟ ಶಕ್ತಿಗಳು ಇಂದಿಗೂ ಇವೆ. ಹರಿಜನವಾಡದಲ್ಲಿ ಹಿರಿಯ ಚೇತನರನ್ನು ನೆನೆಯಬೇಕಾಗಿದೆ. ಹರಿಜನವಾಡ ಹಿರಿಯ ಚೇತನರಾದ ರೆಡ್ಡಿ ಬಾಲಯ್ಯ, ನಾಗಯ್ಯ ತಾತಾ, ರೆಡ್ಡಿ ಚಂದ್ರಯ್ಯ, ಚಂದಪ್ಪ ಇವರ ನಂತರ ಆರ್.ಅಂಜನೇಯಲು, ಮಾರೆಪ್ಪ, ಕೊಲ್ಮಿ ಜಂಗ್ಲೆಪ್ಪ, ನರಸಪ್ಪ, ಜೆಗ್ಲಿ ಬೋಳಬಂಡಪ್ಪ ರವರು ಇದ್ದರು.
ಟಿ.ಚಂದಪ್ಪ, ರೆಡ್ಡಿ ಹನುಮಂತು ರವರು ನೌಕರಿ ಪಡೆದ ನಂತರ ನಮ್ಮ ತಂದೆಯನ್ನು ನಗರಸಭೆ ಸದಸ್ಯರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೯೯೦ ರಿಂದ ಮೂರು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರಾರಂಭಿಸಲಾಗಿದೆ. ಯಾವುದೇ ಪಕ್ಷದಲ್ಲಿ ಇದ್ದವರು ಮೊದಲು ಸಂಘಟನೆ ಮಾಡಬೇಕು. ರಾಜಕಾರಣಿಗಳು ಬೇರೆ ಜಾತಿ, ಜನಾಂಗದೊಂದಿಗೆ ಬೆರಯಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ರವರು ದಲಿತರು, ಶೋಷಿತರು ರಾಜಕೀಯದಲ್ಲಿ ಸ್ಥಾನಮಾನಗಳನ್ನು ಪಡೆಯಬೇಕೆಂದಿದ್ದರು.
ನಮ್ಮಲ್ಲಿ ಹೇಮಲತಾ ಪಿ.ಬೂದೆಪ್ಪ, ಮಮತಾ ಸುಧಾಕರ ರವರು ನಗರಸಭೆ ಅಧ್ಯಕ್ಷರಾಗಿದ್ದರು, ನರಸಮ್ಮ ನರಸಿಂಹಲು ರವರು ನಗರಸಭೆ ಉಪಾಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಈ ಬಡಾವಣೆಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಡಾಯ ಸಾಹಿತಿಗಳಾದ ಬಾಬು ಭಂಡಾರೀಗಲ್ ಮಾತನಾಡಿ, ಆರ್.ಅಂಜನೇಯಲು ಇಂದ ಇಡಿದು ವಸಂತ ಕುಮಾರ್ ರವರಿಗೂ ರಾಜಕೀಯ ಜನ್ಮ ನೀಡಿದ್ದು, ಹರಿಜನವಾಡ ಬಡಾವಣೆ ಎಂದರು.
ಮೆರವಣೆಗೆ: ಕಾರ್ಯಕ್ರಮಕ್ಕೂ ಮುನ್ನಾ ಬೃಹತ್ ಮೆರವಣೆಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಕ್ರೇನ್ ಮೂಲಕ ಬೃಹತ್ ಗಾತ್ರದ ಹೂಮಾಲೇ ಹಾಕಿ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಎ.ವಸಂತ ಕುಮಾರ್ ರವರನ್ನು ಹರಿಜನವಾಡ ನಾಗರೀಕರ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜೆ.ಎಲ್.ಈರಣ್ಣ ಅಭಿನಂದನಾ ನುಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಹೇಮಲತಾ ಪಿ.ಬೂದೆಪ್ಪ, ಉಮಾ ರವೀಂದ್ರ ಜಲ್ದಾರ್, ಎನ್.ಕೆ.ನಾಗರಾಜ, ನಗರಸಭೆ ನಾಮ ನಿರ್ದೇಶಿತ ಸದಸ್ಯ ಮಣಿಕಂಠ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪ್ರತಿಭಾ ರೆಡ್ಡಿ, ಸಿ.ಬೋಳಬಂಡೆಪ್ಪ ಕಟ್ಟಿಮನಿ, ಜೆ.ತಿಮ್ಮಯ್ಯ, ಜೆ.ಸಿದ್ದಪ್ಪ, ಎನ್.ನರಸಪ್ಪ, ಮಮತಾ ಸುಧಾಕರ್, ಆರ್.ಚನ್ನಪ್ಪ, ಪಿ.ಯಲ್ಲಪ್ಪ, ರೆಡ್ಡಿ ತಿಮ್ಮಯ್ಯ, ಕರುಣಾಕರ್ ಕಟ್ಟಿಮನಿ, ಗಣೇಶ ಪಾಳ್ಯಂ, ಜೆ.ಮಾರೆಪ್ಪ, ರವೀಂದ್ರ ಜಲ್ದಾರ್, ಪಿ.ಅಮರೇಶ, ಅಂಬಣ್ಣ ಅರೋಲಿಕರ್, ಜೆ.ತಿಮ್ಮಪ್ಪ ವೇದಿಕೆಯಲ್ಲಿ ಇದ್ದರು.
ಕೆ.ಪಿ.ಅನಿಲ ಕುಮಾರ್ ಸ್ವಾಗತಿಸಿದರು, ಪಿ.ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಜರ್ನಾಧನ ಹಳ್ಳಿಬೆಂಚಿ ವಂದಿಸಿದರು.

Megha News