ರಾಯಚೂರು.ಅಕಸ್ಮಿಕವಾಗಿ ಗುಂಡುಹಾರಿ ಯುವಕನೋರ್ವ ಗಂಭೀರಗಾಯ ಗೊಂಡು ಘಟನೆ ನಗರದ ಮಹಿಳಾ ಸಮಾಜದ ಎದುರಿನ ಎಚ್‌ಆರ್‌ಬಿ ಲೇಔಟ್‌ನಲ್ಲಿ ನಡೆದಿದೆ.
ಮೇ. 3 ರಂದು ಘಟನೆ ನಡೆದಿದ್ದು ಮಹ್ಮದ ಸೋಹಲ್ ಎಂಬ ಯುವಕನ ಎಡಗಾಲಿಗೆ ಗುಂಡು ತಗುಲಿ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ನೇಹಿತರಾದ ಜಿಯಾ ಸೌದಾಗರ ಎಂಬ ತನ್ನ ಮನೆಗೆ ಮಹ್ಮದ ಸೋಹಲ್ ಕರೆದುಕೊಂಡು ಬಂದು ಮನೆಯಲ್ಲಿ ಪಿಸ್ತುಲ್ ತೋರಿಸಿದ್ದಾರೆ. ನಾಲ್ಕು ಈ ಗುಂಡುಗಳನ್ನು ಲೋಡ್ ಮಾಡಿ ನೋಡುತ್ತಿದ್ದಾಗ 5 ಆಕಸ್ಮಿಕ ಫೈರಿಂಗ್ ಆಗಿ ಮಹ್ಮದ ಸೋಹಲ್ ಕಾಲಿಗೆ ಪಡೆದು ಗಾಯಗೊಂಡಿದ್ದಾನೆ. ತಡವಾಗಿ ಪ್ರಕರಣ ಬೆಳೆಕಿಗೆ ಬಂದಿದೆ.
ಬೆದರಿಕೆ: ಘಟನೆ ಕುರಿತು ಬೇರೆಯವರಿಗೆ ಹೇಳಿದರೆ ಪಿಸ್ತುಲ್‌ನಿಂದ ಜಿಯಾ ಸೌದಾಗರ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹ್ಮದ ಸೋಹೆಲ್ ಸದರ ಬಜಾರ
ಠಾಣೆಗೆ ದೂರು ನೀಡಿದ್ದಾನೆ. ಜಯಾ ಸೌದಾಗರ ಬಳಿ ಇರುವ ಪಿಸ್ತುಲ್‌ಗೆ ಪರವಾನಿಗೆಯಿದೇಯೇ, ಪಿಸ್ತೂಲ್ ತೋರಿಸಲು ಕಾರಣವೇನು ಎಂಬದನ್ನು ಸದರ ಬಜಾರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆರ್ಮ್ ಆಕ್ಷನಲ್ಲಿ ಪ್ರಕರಣ ದಾಖಲಾಗಿದೆ.