ರಾಯಚೂರು. ಯುವತಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಕಳೆದ 3 ದಿನಗಳಿಂದ ರಿಮ್ಸ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ವಾರ್ಡ್ ನಂ 23ರ ಮಡ್ಡಿಪೇಟೆ ಬಡಾವಣೆಯಲ್ಲಿನ ಲಕ್ಷಣ ಸ್ವಾಮಿ ಮಂಠ ಹಿಂಭಾಗದಲ್ಲಿ ಡಿ.7 ರಂದು ಮಹಾದೇವಿ(20) ಎಂಬ ಯುವತಿಗೆ ಬೆಳಗೆ 7:30ರ ಸಮಯದಲ್ಲಿ ಮನೆಯ ಮುಂದೆ ಬಿದಿ ನಾಯಿಗಳ ದಂಡು ಯುವತಿಯ ಮೇಲೆ ದಾಳಿ ಮಾಡಿವೆ.
ಯುವತಿ ಕೆಳಗೆ ಬಿದ್ದರೂ ಬಿಡದೇ ಎಲ್ಲೆಂದರಲ್ಲಿ ಕಚ್ಚಿ ಗಾಯಗೋಳಿವೆ, ನಾಯಿಗಳು ತಲೆಗೆ ಕಚ್ಚಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದು, ಪೋಷಕರು ಭಂಡಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ. ಎಚ್ಚರಗೊಳದೇ ಇರುವುರಿಂದ
ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಸ್ಯಾನಿಂಗ್ ಮಾಡಿದ್ದಾರೆ. ತೀವ್ರ ಗಾಯವಾಗಿದ್ದರಿಂದ
ರಕ್ತ ಹೆಪ್ಪುಗಟ್ಟಿದ್ದು ಕೋಮದಲ್ಲಿ ಹೋಗಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವೈದ್ಯರು ಬಳ್ಳಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಬೆಂಗಳೂರಿಗೆ ಹೋಗಲು ಹೇಳಿದ್ದಾರೆ.
ಈ ಯುವತಿಯ ಕುಟುಂಬವು ತೀವ್ರ ಬಡತನದ ಕುಟುಂಬವಾಗಿದ್ದರಿಂದ ಆರ್ಥಿಕ ವ್ಯವಸ್ಥೆಯಿಲ್ಲದೆ ಪುನಃ ಬಳ್ಳಾರಿಯಿಂದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸಹ ಚಿಕಿತ್ಸೆ ಮುಂದುವರೆಸಿದ್ದಾರೆ.