ರಾಯಚೂರು.ನಗರದ ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಶಶಿಧರ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲುಗಳನ್ನು ಸ್ವೀಕರಿಸಿದರು.
ನಗರದ ವಾರ್ಡ್ ನಂ.12ರ ಮಹಮ್ಮದ್ ನಗರದ ನಿವಾಸಿ ಸೈಯದ್ ಜಾಕೀರ್ ಅವರ ಮನೆಗೆ ನಳ ಸಂಪರ್ಕ ಒದಗಿಸಲು ಕಳೆದ 5 ತಿಂಗಳ ಹಿಂದೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿತ್ತು, ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಪರ್ಕ ಒದಗಿಸಲು ಸೂಚಿಸಿದ್ದರೂ ಇದುವರೆಗೆ ನಳ ಸಂಪರ್ಕ ನೀಡಿಲ್ಲವೆಂದು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅರ್ಜಿದಾರ ಮನವಿ ಮಾಡಿದರು.
ನಗರಸಭೆಯ ನಳ ಸಂಪರ್ಕ ಕುರಿತು ಸಂಬಂ ಧಿಸಿದ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದು, ಸಭೆಗೆ ಪೌರಾಯಕ್ತರು ಆಗಮಿಸುವಂತೆ ಮಾಹಿತಿ ನೀಡಿದರು, ಸಭೆ ಆಗಮಿಸದೇ ಪೌರಾಯಕ್ತರು ನಿರ್ಲಕ್ಷ್ಯವಹಿಸಿದ್ದು, ಕೂಡಲೇ ಅರ್ಜಿದಾರನಿಗೆ ನಳ ಸಂಪರ್ಕ ಒದಗಿಸಲು ಸೂಚಿಸದರು.
ಯಕ್ಲಾಸಪೂರ ಗ್ರಾಮದ ನಿವಾಸಿ ಈಶ್ವರ ಅವರು 371 ಜೆ ಪ್ರಮಾಣಪತ್ರ ಕ್ಕಾಗಿ ಅರ್ಜಿ ಸಲ್ಲಿಸಿದ್ದು, ಒಂದು ವಾರದಿಂದ ಥಮ್ಬ್ ನೀಡಿಲ್ಲ, ಹುದ್ದೆಗಳಿ ಅರ್ಜಿ ಸಲ್ಲಿಸಲು ವಿಳಂಭವಾಗುತ್ತಿದೆ ಎಂದು ಮನವಿ ಮಾಡಿದರು.
ಕೂಡಲೇ ತಹಶಿಲ್ದಾರರಿಗೆ ಮಾಹಿತಿ ನೀಡಿ ಇಂತಹ ಅರ್ಜಿಗಳಿಗೆ ತಕ್ಷಣವೇ ಸ್ಪಂದಿಸಲು ಸೂಚಿಸಿದರು.
ನಗರ ನಿವಾಸಿ ಭಾಗ್ಯಮ್ಮ ಅವರ ಪತಿ ಕಳೆದ 1 ವರ್ಷದ ಹಿಂದೆ ನಿಧನರಾಗಿದ್ದು, ವಿಧವಾ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ಇದುವರೆಗೆ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಇಲ್ಲ, ಕೂಡಲೇ ವಿಧವಾ ವೇತನ ಅರ್ಜಿ ಪಡೆಯಲು ಗ್ರೇಡ್ 2 ತಹಶಿಲ್ದಾರ್ ಅವರಿಗೆ ತಿಳಿಸಿದರು.
ದೇವದುರ್ಗ ತಾಲೂಕಿನ ವಾಲ್ಮೀಕಿ ಭವನ ನಿರ್ಮಾಣಕ್ಕೆ ಇಂಜಿನಿಯರ್ ಒಬ್ಬರು 2018ರಲ್ಲಿ 6.35 ಲಕ್ಷ ರೂ ನಲ್ಲಿ ಕಾಮಗಾರಿ ಮಾಡಿದ್ದಾರೆ, ಇಬ್ಬು ಬಾಕಿ ಇರುವಾಗಲೇ 2019ರಲ್ಲಿ ಕೆಆರ್‌ಡಿಎಲ್‌ಗೆ ವಹಿಸಿದೆ, ಬಳಿಕ ಒಂದು ಕಾಮಗಾರಿಗೆ ಮೂರು ಬಾರಿ ತರ್ಡ್ ಪಾರ್ಟಿ ಬೇಡಿ ನೀಡಿ ಪರಿಶೀಲನೆ ಮಾಡಿದೆ ಆದರೆ ಇದುವರೆಗೆ ಬಿಲ್ ಪಾವತಿಯಾಗಿಲ್ಲವೆಂದು ಮನವಿ ಮಾಡಿದರು.ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ವಹಿಸುವುದಾಗಿ ಹೇಳಿದರು.
ತುಂಗಭದ್ರಾ ಗ್ರಾಮದ ನಿವಾಸಿ ಡೇವಿಡ್ ಎನ್ನುವವರ ಜಮೀನು 106/6/3 ವಿಸ್ತೀರ್ಣ 2 ಎಕರೆ ಇದೆ, 1 ಎಕರೆ ಭೂಮಿ ದೌರ್ಜನ್ಯದಿಂದ 4 ಜನರು ಒತ್ತುವರಿ ಮಾಡಿಕೊಂಡಿದ್ದು ಪಟ್ಟಾದರಿಗೆ ನೀಡಲು ಮನವಿ ಮಾಡಿದರು.
ತಾಲೂಕಿನ ಪತ್ತೆಪೂರ ಗ್ರಾಮದ ರೈತ ಜಮೀನುನಿನ ಸರ್ವೆ ನಂಬರ್ 46/2 ವಿಸ್ತೀರ್ಣ 9 ಎಕರೆ 13 ಗುಂಟೆ, ಜಮೀನು ಪಹಣಿಯಲ್ಲಿ ಬದಲಾವಣೆ ಆಗಿದ್ದು ಸರಿಪಡಿಸಲು ಮನವಿ ಮಾಡಿದರು.ತಾಲೂಕಿನ ಮನ್ಸಲಾಪೂರ ಗ್ರಾಮದ ರೈತ ಪಾಗುಂಟಪ್ಪ ಎನ್ನುವವರ ಜಮೀನು ಸರ್ವೆ ನಂ.196/4 ವಿಸ್ತೀರ್ಣ 3 ಎಕರೆ 3 ಗುಂಟೆ ಜಮೀನು ಇದ್ದು, ಜಮೀನುಗೆ ಹೋಗಲು ದಾರಿ ಇದ್ದು ಇದೀಗ ಪಕ್ಕದ ಜಮೀನಿ ಮಾಲೀಕರು ಬಂದ್ ಮಾಡಿಸಿದ್ದಾರೆ ಕ್ರಮ ವಹಿಸಲು ಮನವಿ ಮಾಡಿದರು.
ನಕಾಶ ಪ್ರಕಾರ ದಾರಿಯಿದ್ದಲ್ಲಿ ಬಿಡಿಸಿ ಕೊಡಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಕಾಳಪ್ಪ, ಅಮರೇಶ ಹುಬ್ಬಳಿ, ಗ್ರೆಡ್ 2 ತಹಶಿಲ್ದಾರ್ ಸೈಯದ್ ಮೀರ್ ಅನ್ವರ್ ಸೇರಿದಂತೆ ತಾಲೂಕ ಮಟ್ಡದ ಅಧಿಕಾರಿಗಳು ಭಾಗವಹಿಸಿದ್ದರು.