ರಾಯಚೂರು: ಆಕಸ್ಮಿಕ ಬೆಂಕಿ ತಗುಲಿದ್ದು, 2 ಎಕರೆಗೂ ಹೆಚ್ಚಿನ ಬೆಳೆ ಹಾನಿಯಾಗಿರುವ ಘಟನೆ ತಾಲೂಕಿನ ಆತ್ಕೂರು ಗ್ರಾಮದ ಜಮೀನೊಂದರಲ್ಲಿ ಸೋಮವಾರ ಜರುಗಿದೆ.
ನಾಗೇಶ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಲಕ್ಷ್ಮೀ ರೆಡ್ಡಿ ಹಾಗೂ ಮಹೇಶ ಎಂಬುವವರು ಲೀಸ್ ಪಡೆದು ವ್ಯವಸಾಯ ಮಾಡುತ್ತಿದ್ದರು. ಹೊಲದಲ್ಲಿ ಬೆಳೆದ ಹತ್ತಿ ಬೆಳೆಗೆ ಬೆಂಕಿ ತಗುಲಿದ್ದು, ಸರ್ವೆ.412ರ ಒಟ್ಟು 4.80 ಎಕರೆ ಜಮೀನಿನಲ್ಲಿ 2 ಎಕರೆಗೂ ಹೆಚ್ಚಿನ ಹತ್ತಿ ಬೆಳೆಗೆ ಸೋಮವಾರ ಮದ್ಯಾಹ್ನ 12 ಗಂಟೆಗೆ ಬೆಂಕಿ ತಗುಲಿದೆ. ಆದರೆ ಸಂಜೆ 6:40 ಕ್ಕೆ ಅಗ್ಮಿಶಾಮಕ ಠಾಣೆಗೆ ಮಾಹಿತಿ ಬಂದಿದೆ. ನಂತರ ಜಮೀನಿನಲ್ಲಿದ್ದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಬೆಂಕಿ ತೀವ್ರವಾಗಿದೆ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.