ರಾಯಚೂರು. ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಸರ್ಕಲ್ ದಲ್ಲಿ ಇರುವ ಟಿಪ್ಪುಸುಲ್ತಾನ್ ಭಾವಚಿತ್ರವಿರುವ ನಾಮಫಲಕಕ್ಕೆ ಚಪ್ಪಲಿ ಹಾಕಿ ಅಪಮಾನ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು.
ನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ.31 ರಂದು ಸಿರವಾರ ಪಟ್ಟಣದಲ್ಲಿ ವ್ಯಕ್ತಿಯೋರ್ವ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿದ ಆರೋಪಿ ಆಕಾಶ (24) ವರ್ಷ ಬಂಧಿಸಲಾಗಿದೆ, ಬಂಧಿತ ಆರೋಪಿ ಆಕಾಶ ಮದ್ಯಪಾನ ಮಾಡಿದ್ದು, ನಶೆಯಲ್ಲಿ ಜ.31ರಂದು ರಾತ್ರಿ 2 ಗಂಟೆ ಸುಮಾರಿಗೆ ತನ್ನ ಚಪ್ಪಲಿಗಳಿಗೆ ದಾರಕಟ್ಟಿ ನಾಮಫಲಕಕ್ಕೆ ಹಾಕಿದ್ದಾನೆ ಎಂದು ವಿಚಾರಣೆ ವೇಣೆ ತಿಳಿದು ಬಂದಿದೆ ಎಂದರು.
ಆರೋಪಿ ಆಕಾಶ ಯಾವುದೇ ಕೂಮುಭಾವನೆ ಹರಡಿಸಲು ಈ ಕೃತ್ಯ ಎಸಗಿಲ್ಲ, ಹಾಗೂ ಯಾವು ದೇ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿಲ್ಲ, ಗಾರೆ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಸಂಕ್ರಮಣ ಹಿನ್ನೆಲೆಯಲ್ಲಿ ಸಿರವಾರರಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ.
ಅಂದು ರಾತ್ರಿ ಮದ್ಯಪಾನ ಮಾಡಿ ನಡೆಯಲ್ಲಿ ಈ ಕೃತ್ಯ ಎದಗಿರುವುದು ತಿಳಿದು ಬಂದಿದೆ.
ಆರೋಪಿ ಬಂಧನಕ್ಕೆ ರಾಯಚೂರು ಮತ್ತು ಸಿರವಾರ ಪೋಲಿಸ್ ಠಾಣೆ ಹಾಗೂ ಹೆಚ್ಚುವರಿ ಪೋಲಿಸ್ ಅಧೀಕ್ಷರು ಶಿವು ಕುಮಾರ ಹಾಗೂ ಹರೀಶ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿತ್ತು, ಕಾರ್ಯಚರಣೆ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.