ರಾಯಚೂರು. ಕರ್ನಾಟಕ ರಾಜ್ಯದ ಲೋಕೋಪಯೋಗಿ, ಇಲಾಖೆಯಿಂದ ಪ್ರತಿ ವರ್ಷಕೊಮ್ಮೆ ಎರಡು ದಿನಗಳವರೆಗೆ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಈ ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂಧ್ರತೆ ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ರಸ್ತೆಗಳ ಅಗಲಳತೆ ನಿರ್ಧರಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ ಆದ್ದರಿಂದ ರಸ್ತೆ ಸಂಚಾರಿ ಸಮೀಕ್ಷೆಯನ್ನು ಫೆ.೨೯ಕ್ಕೆ ಮುಂದೂಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರರು ತಿಳಿಸಿದ್ದಾರೆ.
ಫೆ.೨೭ರಂದು ರಾಜ್ಯ ಸರ್ಕಾರ ನೌಕರರ ಮಹಾ ಸಮ್ಮೇಳನ ಹಾಗೂ ಕಾರ್ಯಗಾರ ಇರುವುದರಿಂದ ಫೆ.೨೬ರಿಂದ ಫೆ.೨೮ ರವರೆಗೆ ರಸ್ತೆ ಸಂಚಾರ ಸಮೀಕ್ಷೆಯನ್ನು ನಡೆಸಿದ್ದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ/ನೌಕರರು ಮಹಾಸಮ್ಮೆಳನದಲ್ಲಿ ಸಾಧ್ಯವಾಗದಿರುವುದನ್ನು ಗಮನಿಸಿ ರಸ್ತೆ ಸಂಚಾರ ಸಮೀಕ್ಷೆಯನ್ನು ಬೇರೊಂದು ದಿನಾಂಕದಂದು ನಡೆಸಲು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಕೋರಿದ ಹಿನ್ನೆಲೆಯಲ್ಲಿ ಈ ರಸ್ತೆ ಸಂಚಾರ ಸಮೀಕ್ಷೆಯನ್ನು ಫೆ.೨೯ರ ಬೆಳಿಗ್ಗೆ ೬.೦೦ ಗಂಟೆಯಿಂದ ಮಾ.೨ರ ಬೆಳಿಗ್ಗೆ ೬.೦೦ ಗಂಟೆಯವರೆಗೆ ಸತತವಾಗಿ ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆ ನಡೆಸಲು ತಿಳಿಸಿದ್ದಾರೆ.
ಫೆ.೨೯ರ ಬೆಳಿಗ್ಗೆ ೬.೦೦ ಗಂಟೆಯಿಂದ ಮಾ.೨ರ ಬೆಳಿಗ್ಗೆ ೬.೦೦ ಗಂಟೆಯವರೆಗೆ ಒಟ್ಟು ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆ ಕಾರ್ಯವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಕೆಮರಾ ಸಮೀಕ್ಷೆ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ. ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆಗಾಗಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸಮೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಸಮೀಕ್ಷೆ ಕೇಂದ್ರಗಳಿದ್ದಲ್ಲಿ ವಾಹನ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ, ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಎಂದು ಸೂಚನಾ ಫಲಕಗಳನ್ನು ತೂಗುಬಿಟ್ಟಿರುತ್ತಾರೆ. ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಿಸಬೇಕು ಎಂದು ತಿಳಿಸಿದ್ದಾರೆ.