ರಾಯಚೂರು.ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳು ಬಿದ್ದಿವೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡದೆ.
ತಾಲೂಕಿನಾಧ್ಯಂತವಾಗಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನ್ಸಲಾಪೂರ ಗ್ರಾಮದ ನಾಗಮ್ಮ ಹೆಳವರ್ ಎನ್ನುವವರ ಮನೆಯು ಕುಸಿದು ಬಿದ್ದಿದೆ, ಮನೆ ಒಳಭಾಗದಲ್ಲಿ ಸಂಪೂ ರ್ಣ ಕುಸಿದು ಬಿದ್ದಿದ್ದು ಮನೆಯಲ್ಲಿ ಯಾರು ಇಲ್ಲದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮನೆಯಲ್ಲಿನ ಧವಸ ಧಾನ್ಯಗಳಿಗೆ ಗೋಡೆಯ ಮಣ್ಣು ಬಿದ್ದು ನಷ್ಟ ಉಂಟಾಗಿದೆ. ಮನೆಯಲ್ಲಿ ವಿದ್ಯುತ್ ವೈರ್ ಕಟ್ ಆಗಿದ್ದು ಇದರಿಂದ ಅನುವುತ ತಪ್ಪಿದೆ.
ಮನ್ಸಲಾಪೂರ ಕುಕನೂರು ಗ್ರಾಮಕ್ಕೆ ಸಂಪರ್ಕ ಕಲಲ್ಪಿಸುವ ರಸ್ತೆಯಲ್ಲಿ ಹಳ್ಳ ತುಂಬಿ ಹರಿಯುತ್ತಿದೆ, ಇದರಿಂದಾಗಿ ರಸ್ತೆ ಸಂಪರ್ಕ ಕಡಿಗಗೊಂಡಿದೆ. ಜಮೀನುಗಳಲ್ಲಿ ನೀರು ನಿಂತುಕೊಂಡು ಜಲಾವೃತಗೊಂಡಿದೆ.
ಜಮೀನಿನಲ್ಲಿ ಹಾಕಿದ್ದ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿ ಬೆಳೆ ನಷ್ಟ ಉಂಟಾಗಿದೆ.
ಮರ್ಚೆಡ್ ಗ್ರಾಮದ ಕೆರೆಯು ಸಂಪೂರ್ಣ ಭರ್ತಿಯಾಗಿದ್ದು ಹಿನ್ನೀರಿನಲ್ಲಿ ಹೂವಿನ ತೋಟದ ಆಂಜನೇಯ ದೇವಸ್ಥಾನಕ್ಕೆ ತೆರಳುವ ಮಾರ್ಗ ರಸ್ತೆ ಮುಳುಗಡೆಯಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ, ಜಮೀನುನಲ್ಲಿ ನೀರು ನಿಂತು ಹತ್ತಿ, ತೊಗರಿ ಬೆಳೆ ನೀರಿನಲ್ಲಿ ಮುಳುಗಡೆ ಯಾಗಿವೆ.
ಹೊಸಪೇಟ ಮತ್ತು ಜೇಗರಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳವು ತುಂಬಿ ಹರಿದಿದೆ. ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆಗಳು ಜಲಾವೃತಗೊಂಡಿವೆ.