ರಾಯಚೂರು.ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡದೆ.
ತಾಲೂಕಿನಾಧ್ಯಂತವಾಗಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಡಪನೂರು ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದೆ, ಇದರಿಂದಾಗಿ ಸೇತುವೆ ಮುಳುಗಡೆಯಾಗಿ ಇಡಪನೂರು ತಲ ಮಾರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಮೀನು ಗಲ್ಲಿ ನೀರು ನಿಂತುಕೊಂಡು ಜಲಾವೃತಗೊಂಡಿದೆ.
ಜಮೀನಿನಲ್ಲಿ ಹಾಕಿದ್ದ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿ ಬೆಳೆ ನಷ್ಟ ಉಂಟಾಗಿದೆ.
ತಾಲೂಕಿನ ಮನ್ಸಲಾಪೂರ ಗ್ರಾಮದಲ್ಲಿ ಹೂವಿನ ತೋಟದ ಆಂಜನೇಯ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಹಳ್ಳಿ ತುಂಬಿ ಹರಿದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ, ಜಮೀನುನಲ್ಲಿ ನೀರು ನಿಂತು ಹತ್ತಿ, ತೊಗರಿ ಬೆಳೆ ನೀರಿನಲ್ಲಿ ಮುಳುಗಡೆ ಯಾಗಿವೆ.
ಹೊಸಪೇಟ ಮತ್ತು ಜೇಗರಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳವು ತುಂಬಿ ಹರಿದಿದೆ. ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆಗಳು ಜಲಾವೃತಗೊಂಡಿವೆ.
ಗಧಾರ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲೇ ನೀರು ಹರಿದಿದೆ. ಹಳ್ಳದ ನೀರು ರಸ್ತೆಗೆ ನುಗ್ಗಿವೆ, ಗಧಾರ ಗ್ರಾಮದಿಂದ ಯರಗೇರ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳ್ಳದ ನೀರು ತುಂಬ ಹರಿಯುವುದರಿಂದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹತ್ತಿ ಹಾಗೂ ಇತರ ಬೆಳೆ ಹಾನಿಗೊಂಡಿವೆ.
ಭಾರಿ ಮಳೆಯಿಂದ ಹಲವು ಕಡೆ ಸೇತುವೆ ಮೇಲ್ಬಾಗದಲ್ಲಿ ನೀರು ಹರಿಯುವ ಕಾರಣ ಸಂಚಾರ ಸ್ಥಗಿತವಾಗಿತ್ತು.