Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ: ಮೇ 7 ರಂದು ಮತದಾನ, ಜೂ.4 ರಂದು ಮತ ಏಣಿಕೆ- ಚಂದ್ರಶೇಖರ ನಾಯಕ

ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ: ಮೇ 7 ರಂದು ಮತದಾನ, ಜೂ.4 ರಂದು ಮತ ಏಣಿಕೆ- ಚಂದ್ರಶೇಖರ ನಾಯಕ

ರಾಯಚೂರು, ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಂಡಿದ್ದು ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿದೆ.ಏಪ್ರೀಲ್ 12 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಸಲು ಏ.19 ಕೊನೆ ದಿನವಾಗಿದೆ. ಮೇ.7 ರಂದು ಚುನಾವಣೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಲೋಕಸಭೆ ಚುನಾವಣೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 22 ರಂದು ನಾಮಪತ್ರಗಳ ಹಿಂಪಡೆಯುವ ಕೊನೆದಿನವಾಗಿದೆ. ಮೇ.7 ರಂದು ಮತದಾನ ನಡೆದು ಜೂ.4 ರಂದು ಮತ ಏಣಿಕೆ ನಡೆಯಲಿದೆ ಎಂದರು. ರಾಯಚೂರು ಲೋಕಸಭೆಗೆ 8 ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಒಟ್ಟು 2203 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಸುರುಪುರು-317, ಶಹಪುರು 265, ಯಾದಗಿರಿ 268, ರಾಯಚೂರು ಗ್ರಾಮೀಣ- 275, ರಾಯಚೂರು ನಗರ- 250, ಮಾನವಿ- 276, ದೇವದುರ್ಗ 267 ಮತ್ತು ಲಿಂಗಸೂಗೂರು 285 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ಕೇಂದ್ರವಾಗಿರುತ್ತದೆ. ಬೆಳಿಗ್ಗೆ11 ರಿಂದ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸಲು ಕೇವಲ ಐದು ಜನರಿಗೆ ಮಾತ್ರ ಅವಕಾಶವಿರುತ್ತದೆ. ಅಭ್ಯರ್ಥಿ ಸೇರಿ ಐದು ಜನರು ಭಾಗವಹಿಸಬಹುದಾಗಿದೆ. ಪ್ರತಿ ಅಭ್ಯರ್ಥಿ 90 ಲಕ್ಷ ರೂ ಮಾತ್ರ ವೆಚ್ಚ ಮಾಡಲು ಅವಕಾಶವಿದೆ. ಐದು ವಾಹನಗಳಿಗೆ ಮಾತ್ರ ನಾಮಪತ್ರ ಸಲ್ಲಿಸಲು ಪ್ರವೇಶ ಇರುತ್ತದೆ ಎಂದರು.
ಮತದಾರರು: ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಲಕ್ಷ 93 ಸಾವಿರ,755 ಮತದಾರರಿದ್ದಾರೆ. ಮಹಿಳೆಯರು 10 ಲಕ್ಷ 5 ಸಾವಿರ 246 ಮತ್ತು ಪುರುಷರು 9 ಲಕ್ಷ 85,675 ಮತದಾರರಿದ್ದು, 297 ಇತರರು ಇದ್ದಾರೆ. 42,394 ಯುವ ಮತದಾರರು, 22,857 ವಿಕಲಚೇತನ ಮತದಾರರಿದ್ದಾರೆ. ಮತದಾನಕ್ಕೆ 10 ದಿನ ಮುಂಚಿತವಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅವಕಾಶವಿದೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತು ದೂರು ನೀಡಬಹುದಾಗಿದೆ. ಸಿ-ವಿಜಲ್ ಆಪ್ ಅಥವಾ 1950 ಹಾಗೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಕಂಟ್ರೋಲ್ ರೂಂಗೂ ದೂರು ನೀಡಬಹುದಾಗಿದೆ ಎಂದರು.
ಮತದಾನಕ್ಕೆ ಸಿದ್ದತೆ ಪೂರ್ಣಗೊಂಡಿದ್ದು, 4006 ಬಿಯು, 2756 ಸಿಯು, 2809 ವಿವಿ ಪ್ಯಾಟ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಮತಯಂತ್ರಗಳ ತಪಾಸಣಾ ಕಾರ್ಯ ಪೂರ್ಣಗೊಂಡಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಚಟುವಟಿಕೆಗಳ ಮೇಲೆ ನಿಗಾವಹಿಸು 340 ತಂಡಗಳನ್ನು ರಚಿಸಲಾಗಿದೆ. 2203 ಮತಗಟ್ಟೆಗಳಲ್ಲಿ 423 ಸೂಕ್ಷö್ಮ ಮತ್ತು 46 ಅತಿ ಸೂಕ್ಷö್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಬರಗಾಲ ಹಾಗೂ ಬಿಸಿಲ ಪ್ರಖರತೆ ಹೆಚ್ಚಳವಾಗಿರುವದರಿಂದ ಮತದಾನಪ್ರಮಾಣ ಹೆಚ್ಚಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಗುಳೆ ಹೋದ ಜನರ ಬಗೆಗೆ ಮಾಹಿತಿ ಲಭ್ಯವಿರುವದಿಲ್ಲ. ಗುಳೆ ಹೋಗುವದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ .ಬಿ. ಮಾತನಾಡಿ, ಐದು ಅಂತರಾಜ್ಯ,9 ಅಂತರ ಜಿಲ್ಲೆ ಹಾಗೂ 9 ಜಿಲ್ಲೆಯೊಳಗೆ ಚೆಕ್‌ಪೋಸ್ಟ್ಗಳನ್ನು ಪ್ರಾರಂಭಿಸಲಾಗಿದೆ. 24 ಗಂಟೆ ನಿಗಾವ್ಯವಸ್ಥೆ ಮಾಡಲಾಗಿದೆ. ಈಗಾಗಲೆ ಅಕ್ರಮ ಮಧ್ಯೆ ಸಾಗಾಣೆ ತಡೆಯಲು ಅಂತರಾಜ್ಯ, ಅಂತರ ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಿಆರ್‌ಎಫ್ ತಂಡ ಈಗಾಗಲೇ ಆಗಮಿಸಿದೆ. ಇನ್ನೂ ಏಳು ತುಕಡಿಗಳು ಬರುವನಿರೀಕ್ಷೆಯಿದೆ. ಪೊಲೀಸ್ ಬಲದೊಂದಿಗೆ ಹೋಂಗಾರ್ಡ, ಅರೆಸೇನೆ ಸೇರಿ ಎಲ್ಲವನ್ನು ಚುನಾವಣಾ ಬಂದೋಬಸ್ತ್ಬಳಸಲಾಗುತ್ತದೆ ಎಂದರು. ಈ ಸಂದರ್ಬದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ತುಕಾರಾಂ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

Megha News