ರಾಯಚೂರು. ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಹತ್ತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವಿರಾರು ಮೌಲ್ಯದ ಹತ್ತಿ ಬಸ್ಮವಾಗಿರುವ ಘಟನೆ ತಾಲೂ ಕಿನ ತುರಕನಡೋಣಿ ಗ್ರಾಮದಲ್ಲಿ ನಡೆದಿದೆ.
ಹತ್ತಿ ಗ್ರಾಮದ ನಿವಾಸಿ ಲತಾಮ್ಮ ಎನ್ನುವವರಿಗೆ ಸೇರಿದೆ ಎನ್ನಲಾಗಿದೆ.
ಸೀಡ್ ಹತ್ತಿಯನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟಿ ದ್ದು ಕಳೆದ ರಾತ್ರಿ ಬೆಂಕಿ ಹತ್ತಿಕೊಂಡಿದೆ, ಬೆಂಕಿ ನಂದಿಸಿದರೂ ಪ್ರಯೋಜನೆ ಆಗಿಲ್ಲ, ಹತ್ತಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮವಾಗಿದೆ, ಹತ್ತಿ ಸಂಗ್ರಹಿಸಿ ಇಟ್ಟಿದ್ದು, ಉತ್ತಮ ಬೆಲೆಗಾಗಿ ಕಾಯುತ್ತಾ ಕುಳಿತಿದ್ದರು, ಬೆಲೆ ಇಲ್ಲದೆ ಇರುವುದರಿಂದ ಮಾರಾಟ ಮಾಡದೇ ಇಡಲಾಗಿತ್ತು, ಆದರೆ ಕಳೆದ ರಾತ್ರಿಯಲ್ಲಿ ಬೆಂಕಿ ಬಿದ್ದಿದ್ದರಿಂದ ಲಕ್ಷಾಂತರ ಮೌಲ್ಯದ ಹತ್ತಿ ನಾಶವಾಗಿದೆ, ಬರಗಾಲದ ಮಧ್ಯಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರ ರೈತರ ನೆರವಿಗೆ ಬಂದು ಹತ್ತಿ ನಷ್ಟ ಉಂಟಾಗಿದ ಕಾರಣ ಪರಿಹಾರ ಧನ ನೀಡಬೇಕು ಎಂದು ಇತ್ತಾಯಿಸಿದ್ದಾರೆ.
ಈ ಕುರಿತು ಯರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.