ರಾಯಚೂರು. ವಿದ್ಯುತ್ ಕಂಬಕ್ಕೆ ವೈಯರ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿ ಕೊಂಡಿರುವ ಘಟನೆ ನಗರದ ಗಾಂಧಿ ಚೌಕ್ ಸಮೀಪದ ಕಣ್ವ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ.
ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚಿದ್ದು ಬಿಸಲಿ ಪ್ರಕರತೆಗೆ ಹೆಚ್ಚಿದ್ದರಿಂದ ವಿದ್ಯುತ್ ವೈಯರ್ ಬಿಸಿಗೆ ಸುಟ್ಟುಹೋಗಿದೆ, ಇದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎನ್ನಲಾಗಿದೆ.
ವಿದ್ಯುತ್ ಕಂಬಕ್ಕೆ ಶಾರ್ಟ್ ಸರ್ಕ್ಯೂಟ್ ಉಂಟಾ ಗಿದ್ದರಿಂದ ಗಾಂಧಿ ಚೌಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿ ಸಲಾಗಿದೆ.
ಸ್ಥಳದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಜೆಸ್ಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಮಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.