ರಾಯಚೂರು. ಜಿಲ್ಲಾ ಕಾರಾಗೃಹದ ಅಧೀಕ್ಷಕರಾಗಿ ಅನಿತಾ ಎಸ್ ಹಿರೇಮನಿ ರವರು ಅಧಿಕಾರ ಸ್ವೀಕರಿಸಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಪ್ರಭಾರಿ ಅಧೀಕ್ಷಕರು ಭಾಗ್ಯಶ್ರೀ ಕೆ ಜೈಲರ್ ರವರಿಂದ ಅಧಿಕಾರ ಹಸ್ತಾಂತರ ಮಾಡಲಾಯಿತು.
ಕೇಂದ್ರ ಕಾರಾಗೃಹ ಬೆಂಗಳೂರು ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರಾಗಿ (ಸ್ವ ಪ್ರ) ಕರ್ತವ್ಯ ನಿರ್ವಹಿಸುತ್ತಿದ್ದ ಅನಿತಾ ಎಸ್ ಹಿರೇಮನಿ ರವರು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ವರ್ಗಾವಣೆಯಾಗಿದ್ದಾರೆ. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಈ ಹಿಂದೆ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಆರ್. ಅಂದಾನಿ ಅವರು ಕೇಂದ್ರ ಕಾರಾಗೃಹ ಬೆಂಗಳೂರಿಗೆ ವರ್ಗಾವಣೆಯಾದ ಅವರ ಸ್ಥಾನದಲ್ಲಿ ಅನಿತಾ ಎಸ್ ಹಿರೇಮನಿ ರವರು ಅಧಿಕಾರ ಸ್ವೀಕರಿಸಿದರು.