ರಾಯಚೂರು,ಜ.೬-ಹೆರಿಗೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವಿಗೀಡಾದ ಮತ್ತೊಂದು ಘಟನೆ ನಡೆದಿದೆ.
ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ ಸರಸ್ವತಿ ಗಂಡ ನಿಂಗಯ್ಯ. ಮೃತಪಟ್ಟ ಮಹಿಳೆಯೆಂದು ಗುರುತಿಸಲಾಗಿದೆ.
ಹೆರಿಗೆ ನೋವು ಕಂಡಿದ್ದರಿಂದ ರಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಜನವರಿ ೨ ರಂದುಬಾಣಂತಿ ಸರಸ್ವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮೂರು ದಿನ ಆರೋಗ್ಯವಾಗಿದ್ದ ಮಹಿಳೆ ಆರೋಗ್ಯದಲ್ಲಿ ಎರುಪೇರಾಗಿ ಜನವರಿ ೫ ರಂದು ರವಿವಾರ ಮೃತಪಟ್ಟಿದ್ದಾಳೆ. ಮಗು ಆರೋಗ್ಯವಾಗಿದ್ದು ಚಿಕಿತ್ಸೆಪಡೆಯುತ್ತಿದೆ. ಘಟನೆ ಖಚಿತ ಕಾರಣ ತಿಳಿದು ಬಂದಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮ ಬಾಣಂತಿ ಹೆರಿಗೆ ಆಗಿ ಮಗು ಸಹಿತ ಸಾವಿಗೀಡಾದ ಘಟನೆ ನಡೆದಿತ್ತು.ಈಗ ಮತ್ತೋಂದು ಬಾಣಂತಿ ಸಾವಿನ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣ ನಿಯಂತ್ರಣಕ್ಕೆ ಬಾರದೇ ಹೋಗಿದೆ.ಸಾವಿಗೆ ನಿಖರ ಕಾರಣ ಗೊತ್ತಾಗದೇ ಇರುವದು ಆತಂಕ ಹೆಚ್ಚಲು ಕಾರಣವಾಗಿದೆ.ಬಳ್ಳಾರಿ ಸೇರಿದಂತೆ ಸಿಂಧನೂರಿನಲ್ಲಿ ನಾಲ್ಕು ಘಟನೆ ನಡೆದಿದ್ದು ಘಟನೆ ಕಾರಣ ಇನ್ನೂ ಖಚಿತವಾಗಿಲ್ಲ. ಪ್ರಯೋಗಲಾಯದ ವರದಿ ಬಾಕಿಯಿರುವಾಗಲೇ ಮತ್ತೊಂದು ಘಟನೆ ನಡೆದಿದೆ.
ಘಟನೆ ಬೆಳಕಿಗೆ ಬಂದಾಗ ರಾಜ್ಯ ಸರ್ಕಾರ ಐದು ಲಕ್ಷ ರೂ ಪರಿಹಾರ ಘೋಷಿಸಿತ್ತು.ಆದರೆ ಬೇರೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದರು ಪರಿಶೀಲಿಸದೇ ಹೋಗಿದೆ ಎಂಬ ಟೀಕೆ ಎದುರಿಸುವಂತಾಗಿದೆ.
Megha News > Local News > ಜಿಲ್ಲೆಯಲ್ಲಿ ಮತ್ತೊರ್ವಬಾಣಂತಿ ಸಾವು
ಜಿಲ್ಲೆಯಲ್ಲಿ ಮತ್ತೊರ್ವಬಾಣಂತಿ ಸಾವು
Tayappa - Raichur06/01/2025
posted on
Leave a reply