ರಾಯಚೂರು.ಗದ್ವಾಲ್ ರಸ್ತೆಯು ತಗ್ಗು ಗುಂಡಿ ಗಳಿಂದ ಕೂಡಿದ್ದು, ದಿನನಿತ್ಯ ರಸ್ತೆ ಅಪಘಾತ ಗಳು ಸಂಭವಿಸುತ್ತಿವೆ, ನಿನ್ನೆ ಲಾರಿಯೊಂದು ಕೆಸರಿನಲ್ಲಿ ಸಿಲುಕಿರುವ ಘಟನೆ ಮಾಸುವ ಮು ನ್ನವೇ ಇಂದು ಬೆಳಗಿನ ಜಾವ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ಗುಂಡಿಯಲ್ಲಿ ಬಿದ್ದು ಪಲ್ಟಿಯಾ ಗಿರುವ ಘಟನೆ ನಡೆದಿದ್ದು ಭತ್ತದ ಮೂಟೆಗಳು ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿವೆ.
ನಗರದ ಗದ್ವಾಲ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ, ನಿತ್ಯ ಸಂಚಾರಕ್ಕೆ ಸಾರ್ವಜನಿಕರು ಜೀವ ಭಯದಲ್ಲಿ ತಿರುಗಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಇಂದು ಬೆಳಗಿನ ಜಾವದಲ್ಲಿ ಗದ್ವಾಲ್ ರಸ್ತೆಯಿಂದ ನಗರಕ್ಕರ ಬರುತ್ತಿರುವ ವೇಳೆ ಭತ್ತ ತುಂಬಿದ ಲಾರಿ ಗುಂಡಿಗೆ ವಾಲಿದೆ ಇದರಿಂದ ಲಾರಿ ಪಲ್ಟಿಯಾಗಿದೆ, ಭತ್ತದ ಮೂಟೆಗಳು ಬಿದ್ದಿವೆ, ಕೆಲ ಭತ್ತದ ಮೂಟೆಗಳು ಚೀಲ ಹರಿದು ಹೋಗಿ ದ್ದರಿಂದ ಭತ್ತ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿವೆ.
ರಸ್ತೆಯಲ್ಲಿ ಲಾರಿ ಉರುಳಿದರಿಂದ ಯಾವುದೇ ಪ್ರಾಣಾಪಾಯ ಸಂಬಂಧಿಸಿಲ್ಲ, ಚಾಲಕ ಪಾರಾಗಿದ್ದಾನೆ, ನಂತರ ಬದಲಿ ಲಾರಿಯನ್ನು ತರಿಸಿ ಉಳಿದ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದಾರೆ.
ನಿತ್ಯ ಈ ರಸ್ತೆಯಲ್ಲಿ ಜನರು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ, ಸಾರ್ವಜನಿಕರು ನಗರದಭೆಗೆ ಮತ್ತು ಜಿಲ್ಲಾಡಳಿತಕ್ಕೆ ಇಡಿ ಶಾಪ ಹಾಕಿತ್ತಿದ್ದಾರೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ನಡೆಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.