ಲಿಂಗಸುಗೂರು. ಗಣಿ ಕಂಪನಿಯಿಂದ ಕಲುಷಿತ ನೀರು ಹಳ್ಳಕ್ಕೆ ಬಿಟ್ಟಿದ್ದರಿಂದ ಮೀನುಗಳು ಹಾಗೂ ಜಲಚರಗಳು ಸಾವನಪ್ಪಿದ್ದ ಘಟನೆ ತಾಲೂಕಿನ ಕೋಠಾ ಗ್ರಾಮದಲ್ಲಿ ನಡೆದಿದೆ.
ಹಟ್ಟಿ ಚಿನ್ನದ ಗಣಿ ಕಂಪನಿಯ ತ್ಯಾಜ್ಯದ ಕಲುಷಿತ ನೀರನ್ನು ಹಳ್ಳಕ್ಕೆ ಬಿಡಲಾಗಿದೆ. ಗ್ರಾಮದ ಜಾನು ವಾರುಗಳು, ಆಡುಗಳು, ಮತ್ತು ಜಿಂಕೆ, ನವಿಲು ಗಳು ಸೇರಿದಂತೆ ಇತರೆ ಪ್ರಾಣಿಗಳು ನೀರು ಸೇವಿಸುತ್ತಿವೆ.
ಈ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಪರಿಣಾಮ ಜಲಚರ ಪ್ರಾಣಿಗಳು ಸಾವಿಗೆ ಕಾರಣರಾಗಿದ್ದಾರೆ.
ಹಳ್ಳದ ನೀರು ಕುಡಿಯುವ ನೀರಿಗೆ ಮಿಶ್ರಣವಾದಲ್ಲಿ ಜನರ ಸಾವುನೋವುಗಳು ಸಂಭವಿಸಲಿವೆ.
ಸಂಬಂಧಪಟ್ಟ ಅಧಿಕಾರಿಗಳು ಗಣಿ ಕಂಪನಿಯ ತ್ಯಾಜದ ಕಲುಷಿತ ನೀರನ್ನು ಹಳ್ಳಕ್ಕೆ ಬಿಡದಂತೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.