ರಾಯಚೂರು.ದರ್ವೇಶ ಗ್ರೂಪ್‌ನಲ್ಲಿ ಹಣ ಹೂಡಿಕೆ ಮಾಡಿಕೊಂಡು ವಂಚನೆ ಮಾಡಿದ ಪ್ರಕರಣವನ್ನು ಸೈಬರ್ ಅಪರಾಧ ವಿಭಾಗವು ಸಿಐಡಿ ನೀಡಿದ್ದು ತನಿಖೆ ಆರಂಭಿಸಿದ ತಂಡ 4 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ದರ್ವೇಶ ಗ್ರೂಪ್ ಕಂಪನಿಯಲ್ಲಿ ಹೂಡಿಕೆದಾರರು ಹಣ ಹೂಡಿಕೆ ಮಾಡಿಕೊಂಡು ವಂಚನೆ ಮಾಡಿ ದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಣ ಹೂಡಿಕೆ ಮಾಡಿದ ಚಂದ್ರು ಎಲ್.ಬಿ.ಎಸ್. ನಗರದ ನಿವಾಸಿ ದೂರು ನೀಡಿದ್ದಾರೆ. ದರ್ವೇಶ ಗ್ರೂಪ್ ಕಂಪನಿಯ ಆರೋಪಿತರಾದ ಮೊಹಮ್ಮದ್ ಹುಸೇನ್ ಶುಜಾ, ಸೈಯದ್ ವಸೀಂ, ಸೈಯದ್ ಮಿಸ್ಕಿನ್ ಮತ್ತು ಬದ್ಲು ಅಲಿಯಾಸ್ ಮೊಹಮ್ಮದ್ ಶಾಮೀದ್ ಅಲಿ ಹಾಗೂ ಇತರರು ಹೂಡಿಕೆದಾರ ಚಂದ್ರು ಅವರ ಕುಟುಂಬ ಸದಸ್ಯರಿಂದ 9.5 ಲಕ್ಷ ರೂ. ಹೆಚ್ಚಿನ ಬಡ್ಡಿ ಹಣವನ್ನು ನೀಡುವುದಾಗಿ ಹೂಡಿಕೆ ಮಾಡಿಸಿಕೊಂಡು ಬಡ್ಡಿ ಹಣವನ್ನು ನೀಡದೇ, ತಾನು ವಿನಿಯೋಗಿಸಿದ ಹಣವನ್ನು ವಾಪಸ್ಸು ನೀಡದೇ ಮೋಸ ಮಾಡಿರುತ್ತಾರೆ, ಜೊತೆಗೆ ಇದೇ ರೀತಿ ಸಾವಿರಾರು ಜನರಿಂದ ಹಣವನ್ನು ಹೂಡಿಕೆ ಮಾಡಿಸಿಕೊಂಡು ನೂರಾರು ಕೋಟಿ ಹಣವನ್ನು ಮೋಸ ಮಾಡಿರುತ್ತಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ 3 ಜನ ಆರೋಪಿತರುಗಳಾದ ಬದ್ಲು ಅಲಿಯಾಸ್ ಮೊಹಮ್ಮದ್ ಶಾಮೀದ್ ಅಲಿ, ಮೋ ಸಿನ್ ಮತ್ತು ಅಜರ್ ಅಲಿ ಇವರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ. ಉಳಿದ ಆರೋಪಿತರ ಪತ್ತೆ ಕಾರ್ಯ ನಡೆದಿದೆ.
ಹಣ ಹೂಡಿಕೆ ಮಾಡಿದ ಹೂಡಿಕೆದಾರರರು ತಾವುಗಳು ಹೂಡಿಕೆ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಸಿಐಡಿ ತನಿಖಾಧಿಕಾರಿಗಳಿಗೆ
ಅಧಿಕಾರಿಗಳಲ್ಲಿ ಹಾಜರುಪಡಿಸಿ ತನಿಖೆಗೆ ಸಹಕರಿಸುವಂತೆ ಸಿಐಡಿ ಘಟಕ, ಪೋಲಿಸ್ ಅಧೀಕ್ಷಕರು ತಿಳಿಸಿದ್ದಾರೆ.