Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಹೊಸ ವರ್ಷದ ಆರಂಭದಲ್ಲೆ ವಿದ್ಯಾರ್ಥಿಗಳು ಏರ್‌ಗನ್ ಚಾಕು ಇಡಿದು ಶಾಲೆ ಬಂದು ಹಲ್ಲೆಗೆ ಯತ್ನ

ಹೊಸ ವರ್ಷದ ಆರಂಭದಲ್ಲೆ ವಿದ್ಯಾರ್ಥಿಗಳು ಏರ್‌ಗನ್ ಚಾಕು ಇಡಿದು ಶಾಲೆ ಬಂದು ಹಲ್ಲೆಗೆ ಯತ್ನ

ರಾಯಚೂರು. ಕ್ಷುಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಮಧ್ಯ ಜಗಳ ನಡೆದಿದ್ದು ಹೊಸ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳು ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಮುಂದಾಗಿರುವ ಘಟನೆ ನಗರದ ಜ್ಯೋತಿ ಕಾಲೋನಿಯ ಮದರ್ ಟ್ರಸ್ಟ್ ಶಾಲೆಯ ಸಮೀಪ ನಡೆದಿದೆ ಮಾರಕಾಸ್ತ್ರಗಳನ್ನು ತಂದು ವಿದ್ಯಾರ್ಥಿಗಳ ಮೇಲೆ ಹಲ್ಲೇಗೆ ಯತ್ನಿಸಿದ್ದಾನೆ ಜೊತೆಗೆ ತಮ್ಮ ಬಡಾವಣೆಯ ಯುವಕರನ್ನು ಕರೆದುಕೊಂಡು ಬಂದಿದ್ದಾನೆ ಎಂದು ಹೇಳಲಾಗುತ್ತಿದೆ.

7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ ಪೆನ್ನು ಪುಸ್ತಕ ಹಿಡಿದುಕೊಂಡು ಬರಬೇಕಾದ ವಿದ್ಯಾರ್ಥಿಗಳು ಅದರ ಬದಲಿಗೆ ಏರ್ ಗನ್ ಚಾಕು ಸೇರಿಕೊಂಡು ಬಂದಿದ್ದಾನೆ, ಶನಿವಾರ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ ಈ ಜಗಳ ಇದೀಗ ಓದುವ ವಿದ್ಯಾರ್ಥಿಗಳು ವೈಷಮ್ಯ ಬೆಳೆಸಿಕೊಂಡು, ಇಂದು ಬೆಳಗ್ಗೆ ಶಾಲೆಯ ಸಮಯದಲ್ಲಿ ಹಲ್ಲಿಗೆ ಯತ್ನಿಸಿದ್ದಾನೆ.
ಘಟನೆ ನಡೆಯುತ್ತಿದ್ದ ವೇಳೆ ಹತ್ತಿರದಲ್ಲಿದ್ದ ಸ್ಥಳೀಯರು ಬಿಡಿಸಿದ್ದಾರೆ, ಮಾಹಿತಿ ತಿಳಿದ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು ಪರಸ್ಥಿತಿ ತಿಳಿಗೊಳಿಸಿದ್ದಾರೆ.
ನಂತರ ವಿದ್ಯಾರ್ಥಿಯನ್ನು ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ, ಶಾಲಾ ಮುಂಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಗಲಾಟೆಯ ದೃಶ್ಯ ಸೆರೆಯಾಗಿದೆ ಗಲಾಟೆ ನಡೆದಿರುವುದು, ಕುರಿತು ಪೋಲಿಸರ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೋಷಕರು ಆಗಮಿಸಿ ಈ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

Megha News