ಬೆಂಗಳೂರು. ರಾಯಚೂರು ಗ್ರಾಮೀಣ ವಿಧಾ ನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಅಧ್ಯಕ್ಷರು ಶ್ರೀ ಬಸನಗೌಡ ದದ್ದಲ್ ರವರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ನಡೆಯಿತು.
ನಿಗಮದ ಅಧ್ಯಕ್ಷರಾದ ನಂತರ ಆಡಳಿತ ಮತ್ತು ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನ ಸಭೆ ಲಿಡಕರ್ ಭವನ ಬೆಂಗಳೂರಲ್ಲಿ ನಡೆಯಿತು.
ರಾಜ್ಯದ ಎಲ್ಲಾ 30 ಜಿಲ್ಲಾ ವ್ಯವಸ್ಥಾಪಕ (ಡಿ ಎಂ) ರ ಪ್ರಥಮ ಪರಿಶೀಲನಾ ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು,
ಸ್ಥಳೀಯವಾಗಿರುವ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿ ಪ್ರತಿಯೊಂದು ರಾಜ್ಯ ಮಟ್ಟಕ್ಕೆ ತರಬೇಡಿ ನಿಗಮದಿಂದ ಜಾರಿಯಲ್ಲಿರುವ ಎಲ್ಲಾ ಯೋಜನೆಗಳ ಸಮಗ್ರ ಮಾಹಿತಿಯನ್ನು ಪಡೆದು ಸರ್ಕಾರದ ಮತ್ತು ನಿಗಮದಿಂದ ಸಿಗುವ ಪ್ರತಿಯೊಂದು ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭ್ಯವಾಗುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡೋಣ, ಸಣ್ಣ ಪುಟ್ಟ ಸಮಸ್ಯೆಗಳು ಇದ್ದರೆ ಜಿಲ್ಲಾಮಟ್ಟದಲ್ಲಿ ಅವುಗಳನ್ನು ಬಗೆಹರಿಸಿ, ಜನರನ್ನು ಕಚೇರಿಗಳಿಗೆ ಅಲೆರಾಡುವಂತೆ ಮಾಡಬಾರದು, ಅಂತಹ ಘಟನೆಗಳು ಬೆಳಕಿಗೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ, ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿಗಮದ ಯೋಜನೆಗಳಾದ ಗಂಗಾ ಕಲ್ಯಾಣ ಉದ್ಯಮಶೀಲತೆ ಮಹಿಳಾ ಗುಂಪುಗಳಿಗೆ ಸಹಾಯಧನ ನೀಡುವ ಯೋಜನೆಗಳು ಹಾಗೂ ಇನ್ನೂ ಹಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕೆಲವು ಯೋಜನೆಗಳ ಜಾರಿಯಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ತಕ್ಷಣ ಬಗೆಹರಿಸಲು ಎಂಡಿ ಪದ್ಮನಾಭ ರವರಿಗೆ ಸೂಚನೆ ನೀಡಿದರು.
ಇನ್ನೊಮ್ಮೆ ಸಭೆಗೆ ಬರುವಾಗ ಎಲ್ಲಾ ಜಿಲ್ಲೆಗಳ ಡಿಎಂ ಗಳು ಸಭೆಗೆ ಬರುವಾಗ ಸರ್ಮಪಕವಾದ ಮಾಹಿತಿಯನ್ನು ಪಡೆದು ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳನ್ನು ಅಲಿಸಲಾಗುತ್ತದೆ ಜೊತೆಗೆ ನಿಗಮದಿಂದ ದೊರೆಯುವ ಯೋಜನೆಗಳು ಜನಸಾಮಾನ್ಯರಿಗೆ ನೇರವಾಗಿ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ನಿಗಮದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು