Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಬಷಿರುದ್ದಿನ್ ಅವರ ವೀಡಿಯೋ ವೈರಲ್, ಪರಿಶೀಲನೆ, ಆ ರೀತಿ ಹೇಳಿರುವುದು ಕಂಡು ಬಂದಿಲ್ಲ- ಎಸ್‌ಪಿ

ಬಷಿರುದ್ದಿನ್ ಅವರ ವೀಡಿಯೋ ವೈರಲ್, ಪರಿಶೀಲನೆ, ಆ ರೀತಿ ಹೇಳಿರುವುದು ಕಂಡು ಬಂದಿಲ್ಲ- ಎಸ್‌ಪಿ

ರಾಯಚೂರು. ಇತ್ತೀಚಿನ ದಿವಸಗಳಲ್ಲಿ, ಸಾಮಾಜಿಕ ತಾಣದಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ, ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ, ಪೊಲೀಸ್‌ನವರು ಬೂಟ್‌ನಿಂದ ಹೊಡೆದು ಒಳಗೆ ಹಾಕಬೇಕು”ಎಂದು ಹೇಳಿದರು ಎನ್ನಲಾದ ವಿಡಿಯೋ ಒಂದು, ಇತ್ತೀಚಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪರಿಶೀಲಿಸಿದಾಗ, ಈ ವೀಡಿಯೋ ದಿ. 30.11.2023 ರಂದು ಚಿತ್ರೀಕರಣವಾದ ಘಟನೆ ಆಗಿದೆ.

ಸಂಪೂರ್ಣ ವೀಡಿಯೋವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ, ಆ ರೀತಿ ಹೇಳಿರುವುದು ಕಂಡು ಬಂದಿರುವುದಿಲ್ಲ, ಜಾಲತಾ ಣದಲ್ಲಿ ಹರಿದಾಡುತ್ತಿರುವ ವೀಡಿಯೋ ಪೂರ್ತಿ ಘಟನೆಯ ವೀಡಿಯೋ ಆಗಿರದೆ, ಕೇವಲ ಘಟನೆಯ ತುಣುಕುಗಳು ಆಗಿವೆ, ಆದ್ದರಿಂದ ಸಾರ್ವಜನಿಕರು ಈ ವಿಷಯದಲ್ಲಿ ಸಾಮರಸ್ಯ ಕಾಪಾಡಬೇಕೇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಅವರು ತಿಳಿಸಿದ್ದಾರೆ.

 

Megha News