ರಾಯಚೂರು. ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತಿದೆ, ಇತ್ತೀಚಿಗೆ ತಹಶಿಲ್ದಾರ್ ಕಚೇರಿಯಲ್ಲಿ ಸಿಂಧುತ್ವ ಸಹಿ ಪಡೆಯಲು 2 ಸಾವಿರ ರೂ ಹಣ ಪಡೆಯುತ್ತಿರುವ ಉಪ ತಹಶಿಲ್ದಾರ್ ಭ್ರಷ್ಟಾಚಾರ ಮಾಸುವ ಮುನ್ನವೆ ಇದೀಗ ನಗರಸಭೆಯಲ್ಲಿ ಮತ್ತೊಂದು ಭ್ರಷ್ಟಾಚಾರ ರಾಜರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.
ನಗರಸಭೆಯಲ್ಲಿನ ಜನನ ಮತ್ತು ಮರಣ ಪತ್ರ ವನ್ನು ಪಡೆಯಲು ಅರ್ಜಿ ಹಾಕಿದರೆ ಅದಕ್ಕೆ ಲಂಚ ಕೊಡಬೇಕಾಗಿದೆ, ಸಾರ್ವಜನಿಕರು ಬೇಸ ತ್ತು ಲಂಚ ಕೇಳುತ್ತಿರುವ ವಿಡಿಯೋ ಮಾಡಿ ಸಾಮಾ ಜಿಕ ಜಾಲತಾಣದಲ್ಲಿ ಹರಿಬಿಟ್ಟು, ನಗರಸಭೆಯ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ.
ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಕಂಪ್ಯೂಟರ್ ಆಪರೇಟರ್ ಜಯಶ್ರೀ ಎಂಬವರು ರಾಜಾರೋಷವಾಗಿ ಹಣ ಪಡೆಯುತ್ತಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಒಂದು ಪ್ರತಿಗೆ 12 ರೂ ಹಾಗೂ ಎರಡನೇ ಪ್ರತಿಗೆ 5 ರೂ.ಇದೆ. ಆದರೆ ಇಲ್ಲಿ ಎರಡು ಪ್ರತಿಗೆ 100 ರೂ ಹಣ ಕೊಡಲೇಬೇಕು ಹಣ ಕೊಡದಿದ್ದರೆ ಪ್ರಮಾಣ ಪತ್ರ ನೀಡುವುದಿಲ್ಲ.
ಪ್ರತಿಯೊಂದು ಇಲಾಖೆಗಳಲ್ಲಿ ಸಾರ್ವಜನಿಕ ಸೇವೆ ಒದಗಿಸಬೇಕಾಗ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಸಾರ್ವಜನಿಕರು ಇದಕ್ಕೆ ಬೇಸತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ, ಅಧಿಕಾರಿಗಳು ಈಗಲಾದರೂ ಸಾರ್ವಜನಿಕ ಸೇವೆಯನ್ನು ಲಂಚ ಪಡೆಯದೇ ಸೇವೆ ನೀಡಬೇಕು ಇಲ್ಲದಿದ್ದರೆ ಒಂದಲ್ಲ ಒಂದು ದಿನ ನಿಮ್ಮ ಭ್ರಷ್ಟಾಚಾರ ಹೊರಬೀಳಲಿದೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ.