ರಾಯಚೂರು. ಭಾರತ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಚಾರ ನಡೆಸಲು ವಿಕಾಸ ಯಾತ್ರೆ ಪ್ರಚಾರ ಸೋಮವಾರ ನಗರದಲ್ಲಿ ನಡೆಯಿತು. ಜಿಲ್ಲಾದ್ಯಂತ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊAಡಿರುವ ಭಾರತ ವಿಕಾಸ ಸಂಕಲ್ಪ ಯಾತ್ರೆ ಅಂಬೇಡ್ಕರ್ ವೃತ್ತದ ಬಳಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಚಾರ ನಡೆಸಿದರು.
ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮುದ್ರಾ, ಸ್ವನಿಧಿ ಮತ್ತು ಗ್ರಾಮೀಣ ಅಂಚೆ ವಿಮೆ, ಉಜ್ವಲ್ ಯೋಜನೆ ಸಂಬAಧಪಟ್ಟAತೆ ಬ್ಯಾಂಕ್, ಅಂಚೆ ಮತ್ತು ವಸತಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಇದೇ ವೇಳೆ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಅದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಸದ್ದಾಂ ಹುಸೇನ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕಳೆದ ೫ ವರ್ಷಗಳಿಂದ ಮುದ್ರಾ ಯೋಜನೆಯಡಿ ತಾನು ಮುದ್ರಾ ಬ್ಯಾಂಕ್‌ನಿAದ ಸಾಲ ಪಡೆದು ಮುದ್ರಣಾಲಯ ನಡೆಸುತ್ತಿದ್ದು, ಇದರಿಂದ ನನಗೆ ಮಾಸಿಕ ೩೦,೦೦೦ ರೂ ಲಾಭ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಲ್ಲದೇ ನಾನು ಬ್ಯಾಂಕ್‌ನಿAದ ಸಾಲ ಪಡೆದ ಹಣ ಸಕಾಲಕ್ಕೆ ಪಾವತಿ ಮಾಡಿದ ಕಾರಣ ಸಾಲ ಸೌಲಭ್ಯ ಸರಿಯಾಗಿ ದೊರಕಿದೆ ಎಂದು ಹೇಳಿದರು.
ಇದೇ ವೇಳೆ ಭಾರತ ಸರ್ಕಾರದ ವಿವಿಧ ಯೋಜನೆಗಳು ಬಿಂಬಿಸುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಕಿರುಹೊತ್ತಿಗೆ ವಿತರಿಸಲಾಯಿತು. ಸಿಬಿಸಿ ಅಧಿಕಾರಿ ಸುರೇಶ, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ವಿ.ಜಿ ಬಾವಲತ್ತಿ, ಯುಕೋ ಬ್ಯಾಂಕ್‌ನ ಗಣೇಶ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯ ವಸತಿ ಅಧಿಕಾರಿ ರೂಪಮ್ಮ ಸೇರಿದಂತೆ ಅಂಚೆ ಮತ್ತು ವಿಮಾ ಆಧಾರ ಕಾರ್ಡ್ ನೋಂದಾಯಿಸುವ ಆಪರೇಟರ್‌ಗಳು ಭಾಗವಹಿಸಿದ್ದರು.
Megha News > Local News > ಭಾರತ ವಿಕಾಸ ಸಂಕಲ್ಪ ಯಾತ್ರೆ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಚಾರ
ಭಾರತ ವಿಕಾಸ ಸಂಕಲ್ಪ ಯಾತ್ರೆ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಚಾರ
Tayappa - Raichur19/12/2023
posted on
Leave a reply