ರಾಯಚೂರು. ರಾಷ್ಟ್ರಧ್ವಜವನ್ನು ಕಸ ಸಾಗಿಸುವ ವಾಹನದಲ್ಲಿಟ್ಟು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ತಾಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಪ್ರತಿದಿನ ಗ್ರಾಮ ಪಂಚಾಯತಿ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿ ಸಂಜೆ ಇಳಿಸಲು ಸರ್ಕಾರ ಆದೇಶ ನೀಡಿದೆ.
ರಾಷ್ಟ್ರಧ್ವಜಾರೋಹಣ ಮತ್ತು ಇಳಿಸಲು ತನ್ನದೇ ಆಯ ನಿಯಮಗಳಿಗೆ ಪ್ರತಿದಿನ ಸ್ವಚ್ಚತಾ ಕಾಪಾಡಬೇಕು, ಸುರಕ್ಷಿತ ಸ್ಥಳದಲ್ಲಿ ಇಡಬೇಕು, ಆದರೆ ರಾಷ್ಟ್ರಧ್ವಜವನ್ನು ಕಚೇರಿ ಒಳಗೆ ಇಡುವ ಬದಲಿಗೆ ಕಸ ಸಾಗಿಸುವ ವಾಹನದ ಕಸದ ತೊಟ್ಟಿಯಲ್ಲಿ ಇಟ್ಟು ಅವಮಾನ ಮಾಡಲಾಗಿದೆ.
ಗ್ರಾಮದಲ್ಲಿನ ಕಸವನ್ನು ಸಾಗಿಸುವ ವಾಹನದಲ್ಲಿ ಧ್ವಜ ಇಟ್ಟ ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಗ್ರಾಮಸ್ಥರು ಖಂಡಿಸಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿದಿನ ಇದೇ ರೀತಿ ನಡೆಯುತ್ತಿದೆ, ಈ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ, ಪಿಡಿಒ ನಿರ್ಲಕ್ಷ್ಯದಿಂದಾಗಿ ರಾಷ್ಟ್ರ ದ್ವಜಕ್ಕೆ ಅಪಮಾನ ವಾಗಿದೆ. ಪಿಡಿಒ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.