ರಾಯಚೂರು. ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಇವರ ಜಾತಿ ಕುರಿತಾದ ಆಕ್ಷೇಪಣಾ ಅರ್ಜಿಯೊಂದು ಹೈಕೋರ್ಟನಲ್ಲಿ ವಿಚಾರಣಾಹಂತದ ಲ್ಲಿರುವರಿಂದ ಬಿಜೆಪಿ ಪಕ್ಷ ಹಾಗೂ ಪಕ್ಷೇತರ ಆಭ್ಯರ್ಥಿಯಾಗಿ ಬಿ.ವಿ.ನಾಯಕ ಏ.೧೭ ರಂದು ನಾಮಪತ್ರ ಸಲ್ಲಿಸಿದ್ದು ಸಿದ್ದರಾಗಿದ್ದಾರೆ ಎಂದು ಹೇಳಲಾಗಿದೆ.
ಹಾಲಿ ಸಂಸದ ರಾಜಾ ಅಮರೇಶ್ವರನಾಯಕ ಇವರು ಶಾಲಾ ದಾಖಲೆಗಳಲ್ಲಿ ಕ್ಷತ್ರಿಯ ಎಂದು ನಮೂದಿರುವ ಕುರಿತು ಮಾನವಿ ತಾಲೂಕಿನ ಕರಡಿಗುಡ್ಡದ ನರಸಿಂಹನಾಯಕ ಎಂಬುವವರು ಹೈಕೋರ್ಟ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ಕಲ್ಬುರ್ಗಿ ಹೈಕೋರ್ಟ ಏ.೧೯ ರೊಳಗೆ ದಾಖಲೆ ಸಲ್ಲಿಸುವಂತೆ ಅಮರೇಶ್ವರನಾಯಕರಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಹೈಕೋರ್ಟ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಮರೇಶ್ವರನಾಯಕರ ಸ್ಪರ್ಧೆ ಅವಲಂಬಿತವಾಗಿದೆ ಎಂದು ಹೇಳಲಾಗಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಬಿಜೆಪಿ ಪಕ್ಷದಿಂದಲೇ ಬಿ.ವಿ.ನಾಯಕರನ್ನು ಕಣಕ್ಕೀಳಿಯುವಕುರಿತು ನಿರ್ಧರಿಸಿ ನಾಮಪತ್ರ ಸಲ್ಲಿಕೆಗೆ ಸಿದ್ದತೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇತ್ತಿಚಗಷ್ಟೇ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ ಅಗರವಾಲ್ ಸಮ್ಮುಖದಲ್ಲಿ ನಡೆದ ಚರ್ಚೆ ಸಂದರ್ಬದಲ್ಲಿ ಬಿ.ವಿ.ನಾಯಕರ ಅಸಮಧಾನ ದೂರ ಮಾಡುವ ಪ್ರಯತ್ನ ನಡೆದಿತ್ತು. ಬಿ.ವಿ.ನಾಯಕರಿಂದಲೇ ರಾಜಾ ಅಮರೇಶ್ವರನಾಯಕರಿಗೆ ಬಿ.ಫಾರಂ ಸಹ ವಿತರಿಸಲಾಗಿತ್ತು. ಪಕ್ಷದ ನಿರ್ಧಾರಕ್ಕೆ ಬದ್ದವೆಂದು ಬಿ.ವಿ.ನಾಯಕ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರಿಗೆ ಭರವಸೆ ನೀಡಿದ್ದರು. ಆದರೀಗ ಪಕ್ಷದ ಅಭ್ಯರ್ಥಿ ಅಮರೇಶ್ವರನಾಯಕ ಕುರಿತಾಗಿ ಜಾತಿಗೊಂದಲ ಹೈಕೋರ್ಟ ವಿಚಾರಣೆ ಏ.೧೯ ರಂದು ನಡೆಯಲಿರುವದರಿಂದ ಅಂದೇ ನಾಮಪತ್ರ ಸಲ್ಲಿಸಲು ಕೊನೆದಿನವಾಗಿದೆ. ಬಿಜೆಪಿ ಅಭ್ಯರ್ಥಿ ಸೇರಿ ಪಕ್ಷದ ನಾಯಕರು ಗೊಂದಲಕ್ಕೆ ಸಿಲುಕುವಂತಾಗಿದೆ. ಬಿಜೆಪಿ ನಾಯಕರ ಸೂಚನೆ ಮೇರೆಗೆ ಬಿ.ವಿ.ನಾಯಕ ಒಂದು ಪಕ್ಷದಿಂದ, ಮತ್ತೊಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಅಣಿಯಾಗಿದ್ದಾರೆ ಎಂದು ಹೇಳಲಾಗಿದೆ.
ಪಕ್ಷದ ವರಿಷ್ಟರೊಂದಿಗೆ ನಿರಂತರ ಸಂಪರ್ಕ ಸಾಧಿಸಿರುವ ಬಿ.ವಿ.ನಾಯಕ ಪರಸ್ಥಿತಿಯ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಲಾಗಿದ್ದ, ಹೈಕೋರ್ಟ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪರ್ಯಾಯ ವ್ಯವಸ್ಥೆಯೂ ಬಿಜೆಪಿ ನಾಯಕರು ಚಿಂತನೆಯಲ್ಲಿತೊಡಗಿದ್ದಾರೆ. ವರಿಷ್ಟ ಮೌಖಿಕ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಲು ಸಿದ್ದವಾಗಿರುವ ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಪಕ್ಷದಲ್ಲಿರುವ ಅತೃಪ್ತಿ ಎಲ್ಲವೂ ಮುಗಿದು ಹೋಗಿದೆ ಎಂದು ಹೇಳುತ್ತಿರುವಾಗಲೇ ಬಿ.ವಿ.ನಾಯಕರಿಗೆ ನಾಮಪತ್ರ ಸಲ್ಲಿಸಲು ಅವಕಾಶ ದೊರೆತಂತಾಗಿದೆ.